ತ್ರಿವಳಿ ತಲಾಕ್ ಚರ್ಚೆ ವೇಳೆ ಮುಸ್ಲಿಂ ಮೌಲ್ವಿಯಿಂದ ಸುಪ್ರೀಂಕೋರ್ಟ್ ವಕೀಲೆಗೆ ಕಪಾಳಮೋಕ್ಷ!

ತ್ರಿವಳಿ ತಲಾಕ್ ಕುರಿತಂತೆ ನೇರ ಪ್ರಸಾರದಲ್ಲಿ ಚರ್ಚೆ ನಡೆಯುತ್ತಿದ್ದಾಗ ಮೌಲ್ವಿಯೊಬ್ಬ ಮಹಿಳಾ ವಕೀಲೆ ಮೇಲೆ ಹಲ್ಲೆ ಮಾಡಿದ್ದು ಈ ಸಂಬಂಧ ಮೌಲ್ವಿಯನ್ನು ಪೊಲೀಸರು ಬಂಧಿಸಿದ್ದಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ತ್ರಿವಳಿ ತಲಾಕ್ ಕುರಿತಂತೆ ನೇರ ಪ್ರಸಾರದಲ್ಲಿ ಚರ್ಚೆ ನಡೆಯುತ್ತಿದ್ದಾಗ ಮೌಲ್ವಿಯೊಬ್ಬ ಮಹಿಳಾ ವಕೀಲೆ ಮೇಲೆ ಹಲ್ಲೆ ಮಾಡಿದ್ದು ಈ ಸಂಬಂಧ ಮೌಲ್ವಿಯನ್ನು ಪೊಲೀಸರು ಬಂಧಿಸಿದ್ದಾರೆ. 
ತ್ರಿವಳಿ ತಲಾಕ್ ಸಂಬಂಧಿಸಿದಂತೆ ಖಾಸಗಿ ಸುದ್ದಿವಾಹಿನಿಯಲ್ಲಿ ನೇರ ಪ್ರಸಾರದ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು.  ಈ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೌಲಾನ ಇಜಾಜ್ ಅರ್ಷದ್ ಕಜ್ಮಿ ಹಾಗೂ ಸುಪ್ರೀಂಕೋರ್ಟ್ ನ ಮಹಿಳಾ ವಕೀಲೆಯಾದ ಫರ್ಹಾ ಫೈಯಾಜ್ ನಡುವೆ ಮಾತುಕತೆ ತಾರಕ್ಕೇರಿದೆ. ನೇರಪ್ರಸಾರದ ಕಾರ್ಯಕ್ರಮವನ್ನು ಲೆಕ್ಕಿಸದೆ ಮೌಲಾನ ಫರ್ಹಾ ಫೈಯಾಜ್ ಮೇಲೆ ಹಲ್ಲೆ ಮಾಡಿದ್ದಾರೆ. 
ಕೂಡಲೇ ಎಚ್ಚೆತ್ತ ಸುದ್ದಿವಾಹಿನಿಯ ನಿರೂಪಕರು ಮೌಲಾನನ್ನು ತಡೆದು ಮಹಿಳಾ ವಕೀಲೆಯನ್ನು ರಕ್ಷಿಸಿದ್ದಾರೆ. ಇನ್ನು ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫರ್ಹಾ ಫೈಯಾಜ್ ಪೊಲೀಸ್ ದೂರು ನೀಡಿದ್ದು ಈ ಸಂಬಂಧ ಪೊಲೀಸರು ಕಜ್ಮಿಯನ್ನು ಬಂಧಿಸಿದ್ದಾರೆ. 
ತ್ರಿವಳಿ ತಲಾಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸುಪ್ರೀಂ ಕೋರ್ಟ್ ನ ಮಹಿಳಾ ವಕೀಲೆ ಫರ್ಹಾ ಫಯಾಜ್ ರವರು ತ್ರಿವಳಿ ತಲಾಕ್ ಕುರಿತು ಕುರಾನ್ ನಲ್ಲಿ ಉಲ್ಲೇಖವಿಲ್ಲ. ಮುಸ್ಲಿಂ ಸಮುದಾಯ ಮಹಿಳೆಯ ಮೂಲಭೂತ ಹಕ್ಕಿಗೆ ಧಕ್ಕೆ ಮಾಡುತ್ತಿದ್ದು ಮದುವೆಯ ಸಮಯದಲ್ಲಿ ಲಿಂಗ ತಾರತಮ್ಯ ನೆಡಸುತ್ತದೆ. ಇದರಿಂದಾಗಿ ಮಹಿಳೆಯರು ಬಲಿಪಶುಗಳಾಗಿದ್ದಾರೆ. ತಲಾಖ್ ನಿಂದಾಗಿ ಮಹಿಳೆಗೆ ಸರಿಯಾದ ಪರಿಹಾರಗಳು ಸಹ ಸಿಗುವುದಿಲ್ಲ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದರು. ಇದರಿಂದ ರೊಚ್ಚಿಗೆದ್ದ ಮೌಲಾನಾ ಕಜ್ಮಿ ಮಹಿಳಾ ವಕೀಲೆ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com