ಹಿಮಾಚಲ ಪ್ರದೇಶ : 1968 ರಲ್ಲಿ ನಡೆದಿದ್ದ ವಿಮಾನ ದುರಂತದಲ್ಲಿ ಬಲಿಯಾದವರ ದೇಹ ಪತ್ತೆ

50 ವರ್ಷಗಳ ನಂತರ ಹಿಮಾಚಲ ಪ್ರದೇಶದ ಡಾಕಾ ಗ್ರೇಸಿಯರ್ ವಾಯುನೆಲೆಯಲ್ಲಿ 1968 ರಲ್ಲಿ ನಡೆದಿದ್ದ ವಾಯುಪಡೆ ವಿಮಾನ ದುರಂತದಲ್ಲಿ ಮೃತಪಟ್ಟವರ ದೇಹಗಳು ಪತ್ತೆಯಾಗಿವೆ
ದೇಹಗಳು ಪತ್ತೆಯಾದ ಸ್ಥಳ
ದೇಹಗಳು ಪತ್ತೆಯಾದ ಸ್ಥಳ

ಶಿಮ್ಲಾ: 50 ವರ್ಷಗಳ ನಂತರ ಹಿಮಾಚಲ ಪ್ರದೇಶದ  ಡಾಕಾ ಗ್ರೇಸಿಯರ್ ವಾಯುನೆಲೆಯಲ್ಲಿ 1968 ರಲ್ಲಿ  ನಡೆದಿದ್ದ ವಾಯುಪಡೆ ವಿಮಾನ ದುರಂತದಲ್ಲಿ ಮೃತಪಟ್ಟವರ ದೇಹಗಳು ಪತ್ತೆಯಾಗಿವೆ. ಪರ್ವತಾರೋಹಿಣಿಗಳು  ಜುಲೈ 1 ರಂದು  ಈ ದೇಹಗಳು ಹಾಗೂ ವಿಮಾನದ ಭಾಗಗಳನ್ನು  ಪತ್ತೆ ಮಾಡಿದ್ದಾರೆ.

1968 ಫೆಬ್ರವರಿ 7 ರಂದು ಭಾರತೀಯ ವಾಯುಪಡೆಯ  ಎ ಎನ್ -12  ವಿಮಾನ 102 ಸಿಬ್ಬಂದಿಯನ್ನೊತ್ತು  ಚಂಡಿಗಢದಿಂದ ಲೇಹ್ ವರೆಗೂ ಹಾರಾಟ ನಡೆಸುತಿತ್ತು. ವಾಯುಗುಣ ವೈಫರೀತ್ಯದಿಂದಾಗಿ ಲೆಹ್   ಕಡೆಗೆ ಹೋಗುವ ನಿಟ್ಟಿನಲ್ಲಿ ಪೈಲಟ್ ಹಿಂದಕ್ಕೆ ವಿಮಾನವನ್ನು ತಿರುಗಿಸಿದ್ದಾರೆ. ಆ ಸಂದರ್ಭ ಹಠಾತ್ತನೆ  ವಿಮಾನ ನಾಪತ್ತೆಯಾಗಿತ್ತು.  ಬಳಿಕ ಹಿಮಾಚಲ ಪ್ರದೇಶದ ಲಹೌಲ್ ಬಳಿ ದುರಂತಕ್ಕೀಡಾಗಿತ್ತು.

2003ರಲ್ಲಿ   ಡಾಕಾ ಗ್ರೇಷಿಯರ್ ಬಳಿ ವಿಮಾನದ ಅವಶೇಷಗಳು ಪತ್ತೆಯಾಗಿದ್ದವು.  ಜುಲೈ 1 ರಂದು ಪರ್ವತಾರೋಹಿಣಿಗಳ ತಂಡ ಸ್ವಚ್ಛತಾ ಕಾರ್ಯ ಕೈಗೊಂಡಿದ್ದಾಗ ದೇಹಗಳು ಪತ್ತೆಯಾಗಿವೆ.  ವಿಮಾನದ ಕೆಲ ಭಾಗಗಳನ್ನು ಈ ತಂಡ ಕಂಡುಹಿಡಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com