ಕಚ್ಛಾ ತೈಲ ದರ ಕುಸಿತ, ಶೀಘ್ರ ಪೆಟ್ರೋಲ್-ಡೀಸೆಲ್ ದರ ಇಳಿಕೆಯಾಗುವ ಸಾಧ್ಯತೆ

ಗಗನಕ್ಕೇರಿದ್ದ ತೈಲದರ ಇಳಿಕೆಯಾಗುವ ಮುನ್ಸೂಚನೆ ನೀಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದರದಲ್ಲಿ ಇಳಿಕೆ ಕಂಡುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಗಗನಕ್ಕೇರಿದ್ದ ತೈಲದರ ಇಳಿಕೆಯಾಗುವ ಮುನ್ಸೂಚನೆ ನೀಡಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದರದಲ್ಲಿ ಇಳಿಕೆ ಕಂಡುಬಂದಿದೆ.
ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಗಣನೀಯ ಇಳಿಕೆಯಾಗುವ ಸಾಧ್ಯತೆ ಇದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಛಾತೈಲದರದಲ್ಲಿ ಇಳಿಕೆ ಕಂಡುಬಂದಿರುವುದು ಇದಕ್ಕೆ ಕಾರಣ ಎನ್ನಲಾಗಿದೆ. ಜಾಗತಿಕ ಕಚ್ಚಾ ತೈಲ ದರದಲ್ಲಿ ಕಳೆದ 9 ದಿನಗಳಲ್ಲಿ ಬ್ಯಾರೆಲ್‌ಗೆ 7 ಡಾಲರ್‌ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ಪೆಟ್ರೋಲ್‌ ಮತ್ತು ಡೀಸೆಲ್‌ ದರದಲ್ಲಿ ಗುರುವಾರ ಪ್ರತಿ ಲೀಟರ್‌ಗೆ 6 ಪೈಸೆ ಹಾಗೂ 12 ಪೈಸೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್‌ ದರ ಲೀ.ಗೆ 79.30 ರೂ. ಹಾಗೂ ಡೀಸೆಲ್‌ ದರ 70.56 ರೂ. ಇತ್ತು. ಸಾರ್ವಜನಿಕ ತೈಲ ಕಂಪನಿಗಳು ಅಂತಾರಾಷ್ಟ್ರೀಯ ತೈಲ ದರವನ್ನು ಅವಲಂಬಿಸಿ, ದೇಶೀಯ ದರಗಳನ್ನು ನಿರ್ಧರಿಸುತ್ತವೆ. 
ತೈಲೋತ್ಪಾದಕ ರಾಷ್ಟ್ರಗಳು ಉತ್ಪಾದನೆಯನ್ನು ಹೆಚ್ಚಿಸಿರುವುದು ದರ ಇಳಿಕೆಗೆ ಮೊದಲ ಕಾರಣವಾದರೆ, ಅಮೆರಿಕ ಹಾಗೂ ಚೀನಾ ನಡುವಣ ವಾಣಿಜ್ಯ ಸಮರ ತೈಲದ ಬೇಡಿಕೆಯನ್ನು ತಗ್ಗಿಸಬಹುದು ಎಂದು ಅಂದಾಜಿಸಲಾಗಿದೆ. ಇದರಿಂದ ಕೂಡ ದರ ಇಳಿಕೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಜತೆಗೆ ಅಮೆರಿಕ ಕೂಡ ಭಾರತ ಹಾಗೂ ಇತರ ಕೆಲ ರಾಷ್ಟ್ರಗಳಿಗೆ ಇರಾನ್‌ ನಿಂದ ತೈಲ ಆಮದನ್ನು ಮಾಡಿಕೊಳ್ಳಲು ಯಾವುದೇ ಅಡ್ಡಿ ಮಾಡದಿರುವ ನಿರೀಕ್ಷೆ ಉಂಟಾಗಿದೆ. ಸೌದಿ ಅರೇಬಿಯಾ, ರಷ್ಯಾ ಹಾಗೂ ಅಮೆರಿಕ ತೈಲೋತ್ಪಾದನೆ ಹೆಚ್ಚಿಸುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com