ಮೋದಿ ಸರ್ಕಾರದ ಗೆಲುವಿನಿಂದ ಕುಟುಂಬ ರಾಜಕೀಯಕ್ಕೆ ಸೋಲು: ಅಮಿತ್ ಶಾ

ಲೋಕಸಭೆಯಲ್ಲಿ ವಿಶ್ವಾಸ ಮತ ಗೆದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರವನ್ನು ಕೊಂಡಾಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಮೋದಿ ಸರ್ಕಾರಕ್ಕೆ ಗೆಲವು, ಕೌಟುಂಬಿಕತೆಗೆ ಸೋಲು...
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ
ನವದೆಹಲಿ: ಲೋಕಸಭೆಯಲ್ಲಿ ವಿಶ್ವಾಸ ಮತ ಗೆದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಎನ್'ಡಿಎ ಸರ್ಕಾರವನ್ನು ಕೊಂಡಾಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಮೋದಿ ಸರ್ಕಾರಕ್ಕೆ ಗೆಲವು, ಕೌಟುಂಬಿಕತೆಗೆ ಸೋಲು ಎಂದು ಶನಿವಾರ ಹೇಳಿದ್ದಾರೆ. 
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು, ಕುಟುಂಬದ ನಕಾರಾತ್ಮಕ ರಾಜಕೀಯಕ್ಕಿಂತಲೂ ಪ್ರಜಾಪ್ರಭುತ್ವದ ಬೆಳಕು ದೊಡ್ಡದು. ಪ್ರಧಾನಿ ಮೋದಿ ಸರ್ಕಾರದ ಮೇಲೆ ನಂಬಿಕೆಯಿಟ್ಟು ಬೆಂಬಲ ನೀಡಿದ ಎಲ್ಲಾ ಸಹೋದ್ಯೋಗಿಗಳಿಗೆ, ರಾಜಕೀಯ ಪಕ್ಷಗಳಿಗೆ ಹಾಗೂ ಸಂಸದರಿಗೆ ಬಿಜೆಪಿ ಪರವಾಗಿ ಧನ್ಯವಾದಗಳನ್ನು ಹೇಳುತ್ತೇನೆಂದು ಹೇಳಿದ್ದಾರೆ. 
ಮೋದಿ ಸರ್ಕಾರದ ಗೆಲವು ಪ್ರಜಾಪ್ರಭುತ್ವದ ಗೆಲವು. ಕುಟುಂಬ ರಾಜಕೀಯಕ್ಕೆ ಸೋಲು. ತನ್ನ ಕುಟುಂಬದ ರಾಜಕೀಯ, ಜಾತಿತತ್ತ್ವದ ಮೂಲದ ಬಡ ಕುಟುಂಬದಲ್ಲಿ ಹುಟ್ಟಿ, ಜನತೆಯಿಂದ ಚುನಾಯಿತರಾಗಿರುವ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮೇಲಿನ ದ್ವೇಷವನ್ನು ಮತ್ತೆ ಕಾಂಗ್ರೆಸ್ ದೃಢಪಡಿಸಿದೆ. 

ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡುವ ಮೂಲಕ ಕಾಂಗ್ರೆಸ್ ಇತಿಹಾಸ ಮರುಕಳುಹಿಸುವಂತೆ ಮಾಡಿದ್ದಾರೆ. ಜನರ ಹಿತಾಸಕ್ತಿಗಳ ಕುರಿತಂತೆ ಆಟ ಆಡುತ್ತಿರುವ ಜನರು ಸೋಲು ಕಂಡಿದ್ದಾರೆ. ಈ ಬಾರಿಯ ಎನ್'ಡಿಎ ಸರ್ಕಾರದ ಗೆಲವು ಮುಂದಿನ ಲೋಕಸಭಾ ಚುನಾವಣೆಯ ಗೆಲುವಾಗಿದೆ. ಸಬ್ ಕಾ ಸಾಧ್, ಸಬ್ ಕಾ ವಿಕಾಸ್ ಮಂತ್ರವನ್ನು ಮೋದಿ ಸರ್ಕಾರ ಮುಂದುವರೆಸುತ್ತದೆ. ದೇಶದ ಜನತೆಗೆ ನಮ್ಮ ಮೇಲೆ ಸಂಪೂರ್ಣ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com