ಜಗನ್ ಮೋಹನ್ ರೆಡ್ಡಿ
ಜಗನ್ ಮೋಹನ್ ರೆಡ್ಡಿ

ಜುಲೈ 24 ರಂದು ಆಂಧ್ರಪ್ರದೇಶ ಬಂದ್ ಗೆ ಕರೆ ನೀಡಿದ ವೈಎಸ್ ಆರ್ ಕಾಂಗ್ರೆಸ್

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ವಿವಾದಕ್ಕೆ ಸಂಬಂಧಿಸಿ ಜುಲೈ 24 ರಂದು ಆಂಧ್ರಪ್ರದೇಶ ಬಂದ್ ಗೆ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ ಎಸ್ ಜಗನ್ ಮೋಹನ್ ರೆಡ್ಡಿ ಕರೆ ನೀಡಿದ್ದಾರೆ.

ಕಾಕಿನಾಡ : ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ವಿವಾದಕ್ಕೆ ಸಂಬಂಧಿಸಿ  ಜುಲೈ 24 ರಂದು ಆಂಧ್ರಪ್ರದೇಶ ಬಂದ್ ಗೆ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ವೈ ಎಸ್ ಜಗನ್ ಮೋಹನ್ ರೆಡ್ಡಿ  ಕರೆ ನೀಡಿದ್ದಾರೆ.

ಕೇಂದ್ರಸರ್ಕಾರದಿಂದ ಆಂಧ್ರಪ್ರದೇಶಕ್ಕೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ  ಬಂದ್ ಗೆ ಕರೆ ನೀಡಿರುವುದಾಗಿ  ಜಗನ್ ಮೋಹನ್ ರೆಡ್ಡಿ ಸುದ್ದಿಗಾರರಿಗೆ ತಿಳಿಸಿದರು.ರಾಷ್ಟ್ರಮಟ್ಟದಲ್ಲಿ ಯಾವುದೇ ಪಕ್ಷವನ್ನೂ ಬೆಂಬಲಿಸುತ್ತೇವೆ. ಆದರೆ, ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ತಮ್ಮ ಬೇಡಿಕೆಯಾಗಿದೆ ಎಂದು ಅವರು ಹೇಳಿದ್ದಾರೆ.

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯ ಕುರಿತು ಪ್ರಧಾನಿ ನರೇಂದ್ರಮೋದಿ ಅವರ ಭಾಷಣದ ಬಗ್ಗೆ ಪ್ರತಿಕ್ರಿಯಿಸಿದ ಜಗನ್ ಮೋಹನ್ ರೆಡ್ಡಿ,  ಕಳೆದ ನಾಲ್ಕು  ಈ  ವಿಷಯದ ಬಗ್ಗೆ ನಾವು ಮಾತನಾಡುತ್ತಿದ್ದೇವಿ. ಈಗ ಟಿಡಿಪಿಯ ಗುರಿಯೂ  ಕೇಂದ್ರಸರ್ಕಾರವೇ  ಆಗಿದೆ.  ನಾವು  ಮೋದಿ ಬಲೆಗೆ ಬೀಳುತ್ತೇವೆಯೇ ? ಎಂದು ಹೇಳಿದರು.

ನಿನ್ನೆ ಪ್ರಧಾನಿ ಮೋದಿ ಭಾಷಣದಲ್ಲಿ, ಟಿಡಿಪಿ ಎನ್ ಡಿಎಯಿಂದ ನಿರ್ಗಮಿಸುವ ವೇಳೆಯಲ್ಲಿ ಚಂದ್ರಬಾಬು ನಾಯ್ಡುಗೆ ಪೋನ್ ಮಾಡಿ ಹೇಳಿದ್ದೆ. ವೈಎಸ್ ಆರ್ ಕಾಂಗ್ರೆಸ್  ಬಲೆಗೆ ಬೀಳುತ್ತೀರಾ ಎಂದು ಎಚ್ಚರಿಸಿದ್ದೆ. ಆಂಧ್ರಪ್ರದೇಶ ಜನರಿಗಾಗಿ ಕೆಲಸ ಮಾಡಲಿದ್ದು, ಆಂಧ್ರ ರಾಜ್ಯದ ಅಭಿವೃದ್ದಿಯಾಗಲು ಹೇಳಿದ್ದೆ ಎಂದು ನರೇಂದ್ರಮೋದಿ ಹೇಳಿದರು.

 ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಲ್ಲಿ ಎನ್ ಡಿಎ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಆರೋಪಿಸಿ ಟಿಡಿಪಿ ಅವಿಶ್ವಾಸ ನಿರ್ಣಯ ಮಂಡಿಸಿತ್ತು. ಆದಾಗ್ಯೂ, ತೆಲಂಗಾಣ ರಾಷ್ಟ್ರೀಯ ಸಮಿತಿ  ಹಾಗೂ ಆಂಧ್ರಪ್ರದೇಶ ವಿಭಜನೆಯಿಂದ ಲಾಭ ಪಡೆದುಕೊಂಡವರು, ಎನ್ ಡಿಎ ಬೆಂಬಲಿಸಿದರು.

Related Stories

No stories found.

Advertisement

X
Kannada Prabha
www.kannadaprabha.com