ರಾಜಕೀಯವಾಗಿ ಭದ್ರಗೊಳ್ಳಲು ಕೇಂದ್ರ ಸರ್ಕಾರದಿಂದ ಸಿಬಿಐ, ಇಡಿ ದುರುಪಯೋಗ: ಆನಂದ್ ಶರ್ಮಾ

ಎನ್ ಡಿಎ ಸರ್ಕಾರ ರಾಜಕೀಯವಾಗಿ ನೆಲೆಯೂರಲು ಕೇಂದ್ರದ ಸಿಬಿಐ, ಇಡಿ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ, ಆ ಮೂಲಕ ...
ಆನಂದ್ ಶರ್ಮಾ
ಆನಂದ್ ಶರ್ಮಾ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರ  ರಾಜಕೀಯವಾಗಿ ನೆಲೆಯೂರಲು ಕೇಂದ್ರದ ಸಿಬಿಐ, ಇಡಿ ಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ, ಆ ಮೂಲಕ ದೇಶಾದ್ಯಂತ, ಅಪನಂಬಿಕೆ, ಭಯ ಮತ್ತು ಭಯೋತ್ಪಾದನೆ ಹೆಚ್ಚಿಸುತ್ತಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಆನಂದ್ ಶರ್ಮಾ ಆರೋಪಿಸಿದ್ದಾರೆ.
ಲೋಕಸಭೆಯ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ  ಶರ್ಮಾ, ಸಿಬಿಐ, ಡಿಆರ್ ಐ ಮತ್ತು ಇಡಿಗಳಿಂದ ಒಂದೇ ಕೇಸಿಗೆ ಹಲವು ಎಫ್ ಐಆರ್  ಮತ್ತು ಕೇಸುಗಳನ್ನು ದಾಖಲಿಸಲಾಗುತ್ತಿದೆ ಎಂದು ದೂರಿದ್ದಾರೆ
ರಾಜಕೀಯ ಸೇಡಿಗೆ ಕೇಂದ್ರದ ಏಜೆನ್ಸಿಗಳನ್ನು  ಉಪಕರಣಗಳಾಗಿ ಬಳಸಿಕೊಳ್ಳಲಾಗುತ್ತಿದೆ. ಭ್ರಷ್ಟಾಚಾರ ನಿರ್ಧಾರ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳುವುದರ ನಡುವೆ ಅಂತರವಿದೆ ಎಂದು ಹೇಳಿದ್ದಾರೆ
ತನಿಖಾ ಸಂಸ್ಥೆಗಳು ವ್ಯಕ್ತಿಗಳ ವಿರುದ್ಧ ದೋಷಾರೋಪಣೆ ಮಾಡಿ ಆ ಮೂಲಕ ತಪ್ಪೊಪ್ಪಿಕೊಳ್ಳುವಂತೆ ಮಾಡುತ್ತಿವೆ ಎಂದು ಶರ್ಮಾ ದೂರಿದ್ದಾರೆ..
ಇನ್ನೂ ಶರ್ಮಾ ಅವರ ಆರೋಪಕ್ಕೆ ಉತ್ತರ ನೀಡಿದ ಕೇಂದ್ರ ಸಚಿವ ಪಿಯೂಶ್ ಗೋಯೆಲ್,  ಶರ್ಮಾ ತನಿಖಾ ಸಂಸ್ಥೆಗಳ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com