ಗೋ ರಕ್ಷಣೆ ಹೆಸರಿನಲ್ಲಿ ಭಾರತ ಮಹಿಳೆಯರಿಗೆ ಅಸುರಕ್ಷಿತವಾಗುತ್ತಿದೆ: ಉದ್ಧವ್ ಠಾಕ್ರೆ

ಗೋ ರಕ್ಷಣೆ ಹೆಸರಿನಲ್ಲಿ ಭಾರತ ಮಹಿಳೆಯರಿಗೆ ಸುರಕ್ಷಿತವಲ್ಲದ ದೇಶವಾಗಿ ಮಾರ್ಪಡುತ್ತಿದ್ದು, ಎಲ್ಲರಿಗೂ ನಾಚಿಕೆಯಾಗಬೇಕು....
ಉದ್ಧವ್ ಠಾಕ್ರೆ
ಉದ್ಧವ್ ಠಾಕ್ರೆ
ಮುಂಬೈ: ಗೋ ರಕ್ಷಣೆ ಹೆಸರಿನಲ್ಲಿ ಭಾರತ ಮಹಿಳೆಯರಿಗೆ ಸುರಕ್ಷಿತವಲ್ಲದ ದೇಶವಾಗಿ ಮಾರ್ಪಡುತ್ತಿದ್ದು, ಎಲ್ಲರಿಗೂ ನಾಚಿಕೆಯಾಗಬೇಕು ಎಂದು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಸೋಮವಾರ ಆರೋಪಿಸಿದ್ದಾರೆ.
ಜುಲೈ 27ರಂದು 58ನೇ ವಸಂತಕ್ಕೆ ಕಾಲಿಡುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಮುಖವಾಣಿ ಸಾಮ್ನಾಗೆ ನೀಡಿರುವ ಸಂದರ್ಶನದಲ್ಲಿ, ಖಂಡಿತ ಗೋಮಾತೆಗೆ ರಕ್ಷಿಸಬೇಕು ನಿಜ. ಆದರೆ ನಮ್ಮ ತಾಯಿಗೆ ರಕ್ಷಣೆ ನೀಡುವವರು ಯಾರು? ಇದು ಹಿಂದೂತ್ವ ಅಲ್ಲ ಎಂದಿದ್ದಾರೆ.
ಕಳೆದ 25 ವರ್ಷಗಳಿಂದ ಬಿಜೆಪಿ ಮತ್ತು ಶಿವಸೇನೆ ಹಿಂದೂತ್ವ ಸಿದ್ಧಾಂತ, ರಾಷ್ಟ್ರೀಯ ಹಿತಾಸಕ್ತಿ ಮತ್ತು ದೇಶದ ರಕ್ಷಣೆ ಸೇರಿದಂತೆ ಕೆಲ ಪ್ರಮುಖ ವಿಚಾರಗಳ ಆಧಾರದ ಮೇಲೆ  ಮಿತ್ರ ಪಕ್ಷಗಳಾಗಿವೆ ಎಂದು ಠಾಕ್ರೆ ಹೇಳಿದ್ದಾರೆ.
ಹಿಂದೂತ್ವ ಅಂದರೆ ಏನು? ನಮ್ಮ ತಂದೆ, ಶಿವಸೇನೆ ಸಂಸ್ಥಾಪಕ ದಿ. ಬಾಳಾಸಾಹೇಬ್ ಠಾಕ್ರೆ ಅವರು ರಾಷ್ಟ್ರೀಯತೆಯೇ ನಮ್ಮ ಹಿಂದೂತ್ವ ಎಂದಿದ್ದರು. ಕೇವಲು ದೇವಸ್ಥಾನಕ್ಕೆ ಹೋಗಿ ಗಂಟೆ ಬಾರಿಸುವುದು ಹಿಂದೂತ್ವ ಅಲ್ಲ. ಬಾಳಾಸಾಹೇಬ್ ಠಾಕ್ರೆ ಅವರ ಹಿಂದೂತ್ವವನ್ನು ನಾವು ಪ್ರಚಾರ ಮಾಡಬೇಕಾಗಿದೆ ಮತ್ತು ಜಾರಿಗೊಳಿಸಬೇಕಾಗಿದೆ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.
ಕಳೆದ ಲೋಕಸಭೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದ ವೇಳೆ ಎನ್ ಡಿಎ ಒಕ್ಕೂಟದ ಭಾಗವಾಗಿರುವ ಶಿವಸೇನೆ ಸರ್ಕಾರವನ್ನು ಬೆಂಬಲಿಸಲಿಲ್ಲ. ಅವಿಶ್ವಾಸ ನಿರ್ಣಯದಿಂದ ಶಿವಸೇನೆ ದೂರ ಉಳಿಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com