ರಾಹುಲ್ ದ್ವೇಷದ ವ್ಯಾಪಾರಿ; ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷರ ವಿರುದ್ಧ ಬಿಜೆಪಿ ಕಿಡಿ

ರಾಜಸ್ಥಾನದ ಆಳ್ವಾರ್ ಸಾಮೂಹಿಕ ಹಲ್ಲೆ, ಸಾವು ಪ್ರಕರಣ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸೋಮವಾರ ತೀವ್ರವಾಗಿ ಕಿಡಿಕಾರಿದೆ...
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ: ರಾಜಸ್ಥಾನದ ಆಳ್ವಾರ್ ಸಾಮೂಹಿಕ ಹಲ್ಲೆ, ಸಾವು ಪ್ರಕರಣ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಸೋಮವಾರ ತೀವ್ರವಾಗಿ ಕಿಡಿಕಾರಿದೆ. 
ಗುಂಪು ಹಲ್ಲೆಗೊಳಗಾಗಿ ತೀವ್ರವಾಗಿ ಗಾಯಗೊಂಡಿದ್ದ ಸಂತ್ರಸ್ತನನ್ನು 6 ಕಿಮೀ ದೂರದ ಆಸ್ಪತ್ರೆಗೆ ಕರೆದೊಯ್ಯಲು ಆಳ್ವಾರ್ ಪೊಲೀಸರು 3 ಗಂಟೆ ಸಮಯ ತೆಗೆದುಕೊಂಡಿದ್ದು ಏಕೆ? ಎಂದು ಪ್ರಶ್ನಿಸಿದ್ದ ರಾಹುಲ್ ಗಾಂಧಿಯವರು ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದರು. 
ಈ ಹೇಳಿಕೆಗೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ಯಾವುದೇ ಅಪರಾಧ ನಡೆದ ಪ್ರತಿ ಬಾರಿ ಖುಷಿಯಿಂದ ನೆಗೆದಾಡುವುದನ್ನು ನಿಲ್ಲಿಸಿ. ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಈಗಾಗಲೇ ಕಠಿಣ ಕ್ರಮ ಕೈಗೊಳ್ಳುವ ಭರವಸೆ ನೀಡಿದೆ. ನೀವು ಸಮಾಜವನ್ನು ಎಲ್ಲಾ ರೀತಿಯಲ್ಲಿಯೂ ವಿಭಜಿಸುತ್ತಿದ್ದೀರಿ. ಅದು ಕೂಡ ಚುನಾವಣೆಯ ಲಾಭಕ್ಕಾಗಿ. ಆ ಮೇಲೆ ಮೊಸಳೆ ಕಣ್ಣೀರು ಹಾಕುತ್ತೀರಿ. ಈವರೆಗೂ ಆಗಿದ್ದು ಸಾಕು, ನೀವೊಬ್ಬ ದ್ವೇಷದ ವ್ಯಾಪಾರಿ ಎಂದು ಟಾಂಗ್ ನೀಡಿದ್ದಾರೆ. 
ಇದರಂತೆ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಸ್ಮೃತಿ ಇರಾನಿ ಕೂಡ ರಾಹುಲ್ ವಿರುದ್ಧ ಟ್ವೀಟ್ ಮಾಡಿದ್ದು, ನಿಮ್ಮ ಚುನಾವಣಾ ಲಾಭಕ್ಕಾಗಿ ಸಾಮಾಜಿಕ ಸಂಬಂಧಗಳನ್ನು ಹಾಳು ಮಾಡಲು ಯತ್ನ ನಡೆಸುತ್ತಿದ್ದೀರಿ. 1984ರಲ್ಲಿ ಸಂಭವಿಸಿದ್ದ ದುರಂತಗಳಾದ ಭಾಗಲ್ಪುರ, ನೆಲ್ಲಿ ಇತರೆ ದ್ವೇಷ ಪ್ರಕರಣಗಳಲ್ಲಿ ರಾಹುಲ್ ಗಾಂಧಿ ಕುಟುಂಬ ಅಧ್ಯಕ್ಷತೆ ವಹಿಸಿತ್ತು. ಇಂತಹ ಸಂಸ್ಕೃತಿಯ ರಾಜಕೀಯವನ್ನೇ ರಾಹುಲ್ ಗಾಂಧಿಯವರು ಮುಂದುವರೆಸುತ್ತಿರುವುದು ನಿಜಕ್ಕೂ ಹೇಸಿಗೆಯ ವಿಚಾರ. ಇಂತಹ ಪ್ರಕರಣಗಳಿಂದ ಚುನಾವಣಾ ಲಾಭಗಳಿಗಾಗಿ ಇಂತಹ ಪ್ರಕರಣಗಳಲ್ಲಿ ಭಾಗಿಯಾಗದೆ ಇರುವ ಒಂದು ಉದಾಹರಣೆಗಳೂ ಇಲ್ಲ ಎಂದು ಹೇಳಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com