ಸಾಮೂಹಿಕ ಹಲ್ಲೆ ಆತಂಕ: ಬಂಧನ ವಾರಂಟ್ ರದ್ದು ಕೋರಿದ ಮೆಹುಲ್ ಚೋಕ್ಸಿ

ನಾನು ಭಾರತಕ್ಕೆ ಬಂದರೆ ಸಾಮೂಹಿಕವಾಗಿ ನನ್ನನ್ನು ಹೊಡೆದು ಸಾಯಿಸುವ ಸಾಧ್ಯತೆ ಇದೆ. ಹೀಗಾಗಿ ನನ್ನ ವಿರುದ್ಧದ ....
ಗೀತಾಂಜಲಿ ಜಿಮ್ಸ್
ಗೀತಾಂಜಲಿ ಜಿಮ್ಸ್
ಮುಂಬೈ: ನಾನು ಭಾರತಕ್ಕೆ ಬಂದರೆ ಸಾಮೂಹಿಕವಾಗಿ ನನ್ನನ್ನು ಹೊಡೆದು ಸಾಯಿಸುವ ಸಾಧ್ಯತೆ ಇದೆ. ಹೀಗಾಗಿ ನನ್ನ ವಿರುದ್ಧದ ಜಾಮೀನು ರಹಿತ ಬಂಧನ ವಾರಂಟ್ ರದ್ದುಗೊಳಿಸುವಂತೆ ಬಹುಕೋಟಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌(ಪಿಎನ್ ಬಿ) ಹಗರಣದ ಆರೋಪಿ, ಗೀತಾಂಜಲಿ ಜೆಮ್ಸ್ ನ ಮಾಲೀಕ ಮೆಹುಲ್‌ ಚೋಕ್ಸಿ ಸೋಮವಾರ ಮುಂಬೈ ವಿಶೇಷ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಪಿಎನ್ ಬಿ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಚೋಕ್ಸಿ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಪಿಎಂಎಲ್ ವಿಶೇಷ ಕೋರ್ಟ್ ಆರೋಪಿ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಜಾರಿಗೊಳಿಸಿತ್ತು.
ನನಗೆ ನನ್ನ ಮಾಜಿ ಉದ್ದೋಗಿಗಳಿಂದ ಮಾತ್ರವಲ್ಲದೆ, ಸಾಲಗಾರರಿಂದಲೂ ಜೀವಕ್ಕೆ ಆಪಾಯ ಇದೆ. ಅಲ್ಲದೆ ಜೈಲು ಸಿಬ್ಬಂದಿ ಮತ್ತು ಸಹ ಕೈದಿಗಳಿಂದಲೂ ಜೀವ ಬೆದರಿಕೆ ಇದೆ ಎಂದು ಚೋಕ್ಸಿ ತನ್ನ ಅರ್ಜಿಯಲ್ಲಿ ತಿಳಿಸಿದ್ದಾರೆ.
ಭಾರತದಲ್ಲಿ ಇತ್ತೀಚಿಗೆ ಸಾಮೂಹಿಕವಾಗಿ ಹೊಡೆದು ಸಾಯಿಸುವ ಪ್ರಕರಣಗಳು ಹೆಚ್ಚುತ್ತಿದ್ದು, ಒಂದು ವೇಳೆ ನಾನು ಭಾರತಕ್ಕೆ ಬಂದರೆ ನನ್ನನ್ನು ಹೊಡೆದು ಸಾಯಿಸುವ ಸಾಧ್ಯತೆ ಇದೆ ಎಂದು ಚೋಕ್ಸಿ ಹೇಳಿದ್ದಾರೆ.
ಚೋಕ್ಸಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ವಿಶೇಷ ಪಿಎಂಎಲ್ ಕೋರ್ಟ್ ನ್ಯಾಯಾಧೀಶ ಎಂಎಲ್ ಅಜ್ಮಿ ಅವರು, ಆರೋಪಿ ಅರ್ಜಿಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿ, ವಿಚಾರಣೆಯನ್ನು ಆಗಸ್ಟ್ 18ಕ್ಕೆ ಮುಂದೂಡಿದೆ.
ಅಕ್ರಮ ಹಣ ವಹಿವಾಟು ಪ್ರಕರಣಕ್ಕೆ ಸಂಬಂಧಿಸಿದಂತೆ ಚೋಕ್ಸಿ ವಿರುದ್ಧ ಕೋರ್ಟ್ ಈಗಾಗಲೇ ಜಾಮೀನು ರಹಿತ ಬಂಧನ ವಾರಂಟ್ ಜಾರಿ ಮಾಡಿದ್ದು, ಇದನ್ನು ಆದರಿಸಿ ರೆಡ್ ಕಾರ್ನರ್ ನೋಟಿಸ್ ಗೂ ಇಡಿ ಮನವಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com