ಜಯಲಲಿತಾ ಗರ್ಭಿಣಿಯಾಗಿರಲಿಲ್ಲ: ತ.ನಾಡು ಸರ್ಕಾರದಿಂದ ಮದ್ರಾಸ್ ಹೈಕೋರ್ಟ್ ಗೆ ಸಾಕ್ಷ್ಯಸಲ್ಲಿಕೆ

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ತನ್ನ ಜೀವಿತಾವಧಿಯಲ್ಲಿ ಎಂದಿಗೂ ಗರ್ಭಿಣಿಯಾಗಲಿಲ್ಲ ಎಂದು ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್ ಗೆ ಸಾಕ್ಷಗಳನ್ನು ಸಲ್ಲಿಸಿದೆ.
ಜೆ. ಜಯಲಲಿತಾ
ಜೆ. ಜಯಲಲಿತಾ
ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ತನ್ನ ಜೀವಿತಾವಧಿಯಲ್ಲಿ ಎಂದಿಗೂ ಗರ್ಭಿಣಿಯಾಗಲಿಲ್ಲ ಎಂದು ತಮಿಳುನಾಡು ಸರ್ಕಾರ ಮದ್ರಾಸ್ ಹೈಕೋರ್ಟ್ ಗೆ ಸಾಕ್ಷ್ಯ ಗಳನ್ನು ಸಲ್ಲಿಸಿದೆ. 1980 ರ ದಶಕದ ಅಂತ್ಯದಲ್ಲಿ ಚಿತ್ರೀಕರಿಸಲಾಗಿರುವ ವೀಡಿಯೊ ಕ್ಲಿಪ್ ಗಳನ್ನು ಮಂಗಳವಾರ ಸರ್ಕಾರವು ನ್ಯಾಯಾಲಯಕ್ಕೆ ನೀಡಿದೆ.
ಬೆಂಗಳೂರಿನ ಅಮೃತ ಪ್ರಕರಣಕ್ಕೆ ಸಂಬಂಧಿಸಿ ತಮಿಳುನಾಡು ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಈ ಸಾಕ್ಷ್ಯವನ್ನು ಸಾದರಪಡಿಸಿದ್ದಾರೆ. ಅಮೃತ ತಾವು ಎಐಎಡಿಎಂಕೆ  ಮಾಜಿ ನಾಯಕಿಯ ಪುತ್ರಿ ಎಂದು ಹೇಳಿಕೊಂಡಿದ್ದರು.
ಅರ್ಜಿದಾರರಾದ ಅಮೃತಾ ಜಯಲಲಿತಾ ಅವರ ಆಸ್ತಿ ಕಬಳಿಸುವ ಸಲುವಾಗಿ ಸುಳ್ಳು ದಾವೆ ಹೂಡಿದ್ದಾರೆ. ಅವರು ಇದುವರೆಗೆ ತವು ಜಯಲಲಿತಾ ಅವರ ಮಗಳೆಂದು ಹಲವು ದಾಖಲೆಗಳನ್ನು ನೀಡಿದ್ದಾರಾದರೂ ತಾಯಿಯೊಂದಿಗಿರುವ ಒಂದೇ ಒಂದು ಭಾವಚಿತ್ರವನ್ನೂ ಆಕೆ ನಿಡಿಲ್ಲ. ಹಿಗಾಗಿ ಆಕೆ ಹೇಳುವುದನ್ನು ನಂಬಲು ಸಾಧ್ಯವಿಲ್ಲ ಎಂದು ಅಡ್ವೊಕೇಟ್ ಜನರಲ್ ವಾದಿಸಿದ್ದಾರೆ.
ಅಮೃತಾ 1980 ಆಗಸ್ಟ್ ನಲಿ ಜನಿಸಿದ್ದರು. ಅದಕ್ಕಾಗಿ ಆ ವರ್ಷ ಸಿನಿಮಾ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಜಯಲಲಿತಾ ಅವರ ವೀಡಿಯೋ ಸಾಕ್ಷ್ಯವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆ ಕಾರ್ಯಕ್ರಮ ಅಮೃತಾ ಹುತ್ಟುವ ಒಂದು ತಿಂಗಳು ಮುನ್ನ ನಡೆದಿದ್ದಾಗಿದೆ. ಇದರಲ್ಲಿ ಜಯಲಲಿತಾ ಗರ್ಭಿಣಿ ಎನ್ನುವ ಯಾವ ಗುರುತೂ ಕಂಡಿಲ್ಲ.
ಸಧ್ಯ ಜಯಲಲಿತಾ ಅವರ ಸಂಬಂಧಿಗಳ ಡಿಎನ್ ಎ ಹಾಗೂ ಅಮೃತಾ ಅವರ ಡಿಎನ್ ಎ ಸ್ಯಾಂಪಲ್ ತೆಗೆದುಕೊಂಡು ಪರಿಶೀಲಿಸಲು ನ್ಯಾಯಾಲಯ ಅನುಮತಿ ನೀಡಬೇಕೆಂದು ಅವರು ವಾದಿಸಿದ್ದಾರೆ.
ವಾದವನ್ನಾಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಮುಂದಿನ ವಾರಕ್ಕೆ ಮುಂದೂಡಿ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com