ಇಮ್ರಾನ್ ಖಾನ್ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ ಎಂಬುದು ತಪ್ಪು ಕಲ್ಪನೆ - ಸುಬ್ರಹ್ಮಣ್ಯ ಸ್ವಾಮಿ

ಪಾಕಿಸ್ತಾನದ ಪ್ರಧಾನಮಂತ್ರಿ ಗದ್ದುಗೆ ಏರುವ ತವಕದಲ್ಲಿರುವ ಇಮ್ರಾನ್ ಖಾನ್ ಭಾರತದೊಂದಿಗಿನ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ ಎಂಬುದು ತಪ್ಪು ಕಲ್ಪನೆಯಾಗಿದೆ ಎಂದು ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಹೇಳಿದ್ದಾರೆ.
ಸುಬ್ರಹ್ಮಣ್ಯ ಸ್ವಾಮಿ
ಸುಬ್ರಹ್ಮಣ್ಯ ಸ್ವಾಮಿ

ನವದೆಹಲಿ: ಪಾಕಿಸ್ತಾನದ ಪ್ರಧಾನಮಂತ್ರಿ ಗದ್ದುಗೆ ಏರುವ ತವಕದಲ್ಲಿರುವ ಇಮ್ರಾನ್ ಖಾನ್  ಭಾರತದೊಂದಿಗಿನ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಲಿದ್ದಾರೆ ಎಂಬುದು ತಪ್ಪು ಕಲ್ಪನೆಯಾಗಿದೆ ಎಂದು   ಬಿಜೆಪಿ ಮುಖಂಡ ಸುಬ್ರಹ್ಮಣ್ಯ ಸ್ವಾಮಿ ಹೇಳಿದ್ದಾರೆ.

ಇಮ್ರಾನ್ ಖಾನ್ ಅವರ ಬಗ್ಗೆಯೇ  ಹೆಚ್ಚಿನ ಕನಸುಕಾಣುತ್ತಿದ್ದು,ಪಾಕಿಸ್ತಾನದೊಂದಿಗೆ ಕಾಶ್ಮೀರ ಕುರಿತು ಮಾತುಕತೆ ನಡೆಸುವ ಅಗತ್ಯವಿಲ್ಲ.ನಮ್ಮ ಕಾಶ್ಮೀರದ ಮೂರನೇ ಒಂದು ಭಾಗವನ್ನು ಪಾಕಿಸ್ತಾನ ಅಕ್ರಮವಾಗಿ ಹೊಂದಿದೆ. ಅದನ್ನು ಪಾಕಿಸ್ತಾನ ಮರಳಿ ಭಾರತಕ್ಕೆ ನೀಡಬೇಕು,  ಇಲ್ಲದಿದ್ದರೆ  ಭವಿಷ್ಯದಲ್ಲಿ ಎದುರಾಗುವ ಪಾಕಿಸ್ತಾನ ವಿಭಜನೆಗೆ ಸಿದ್ಧರಾಗುವಂತೆ  ಸ್ವಾಮಿ ಹೇಳಿದ್ದಾರೆ.

ಚುನಾವಣೆ ನಂತರ  ಮಾತನಾಡಿದ ಪಾಕಿಸ್ತಾನ ತೆಹ್ರಿಕ್ ಇ- ಇನ್ಸಪ್  ಮುಖ್ಯಸ್ಥ ಇಮ್ರಾನ್ ಖಾನ್, ದೇಶದ ಅಭಿವೃದ್ದಿ ಹಾಗೂ ಆಡಳಿತದ ಬಗ್ಗೆ  ಕನಸು ಹೊಂದಿದ್ದು, ವಿದೇಶಾಂಗ  ನೀತಿಗೆ ಆದ್ಯತೆ ನೀಡುವುದಾಗಿ ಹೇಳಿಕೆ ನೀಡಿದ್ದಾರೆ. ಭಾರತದೊಂದಿಗೆ ಉತ್ತಮ ಸಂಬಂಧ ಹೊಂದಲಿದ್ದು, ಮಾತುಕತೆಯ ಮೂಲಕ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವುದಾಗಿ ಹೇಳಿದ್ದರು.

 ಬಲೊಚಿಸ್ತಾನದಲ್ಲಿ ಭಾರತದಲ್ಲಿ ತೊಂದರೆ  ಹಾಗೂ ಕಾಶ್ಮೀರದಲ್ಲಿ ಪಾಕಿಸ್ತಾನದ ತೊಂದರೆ  ಬಗ್ಗೆ ಕೂತು  ಸಮಸ್ಯೆ ಬಗೆಹರಿಸಿಕೊಳ್ಳಲಾಗುವುದು,  ಈ ನಿಟ್ಟಿನಲ್ಲಿ ಭಾರತ  ಒಂದು ಹೆಜ್ಜೆ ಮುಂದಿದ್ದರೆ ಪಾಕಿಸ್ತಾನ ಎರಡು ಹೆಜ್ಜೆ ಮುಂದಿಡಲಾಗುವುದು, ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಂಡು ಭಾರತದೊಂದಿಗೆ ಉತ್ತಮ ಸ್ನೇಹ ಹೊಂದುವುದಾಗಿ ಇಮ್ರಾನ್ ಖಾನ್ ಹೇಳಿಕೆ ನೀಡಿದ್ದರು.

ಪಾಕಿಸ್ತಾನದಲ್ಲಿ ನಡೆದ ಚುನಾವಣೆಯಲ್ಲಿ ಇಮ್ರಾನ್ ಖಾನ್  ನೇತೃತ್ವದ ಪಿಟಿಐ ಪಕ್ಷ ಹೆಚ್ಚು  ಸ್ಥಾನಗಳನ್ನು ಪಡೆದುಕೊಂಡು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆದಗ್ಯೂ, ಚುನಾವಣಾ ಆಯೋಗ ಅಂತಿಮ ಫಲಿತಾಂಶವನ್ನು  ಇನ್ನೂ ಪ್ರಕಟಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com