ಬೇಡಿಕೆ ಈಡೇರಿಕೆಗೆ ಸರ್ಕಾರದಿಂದ ಭರವಸೆ: 8 ದಿನಗಳ ಲಾರಿ ಮುಷ್ಕರ ಕೊನೆಗೂ ಅಂತ್ಯ

ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ಲಾರಿ ಚಾಲಕರ ನಡುವಿನ ಮಾತುಕತೆ ಯಶಸ್ವಿಯಾಗಿದ್ದು, 8 ದಿನಗಳ ಮುಷ್ಕರವನ್ನು ಲಾರಿ ಚಾಲಕರು ವಾಪಸ್ ಪಡೆದಿದ್ದಾರೆ.
ಸರ್ಕಾರದಿಂದ ಭರವಸೆ: ಮುಷ್ಕರ ವಾಪಸ್ ಪಡೆದ ಲಾರಿ ಚಾಲಕರು
ಸರ್ಕಾರದಿಂದ ಭರವಸೆ: ಮುಷ್ಕರ ವಾಪಸ್ ಪಡೆದ ಲಾರಿ ಚಾಲಕರು
ಬೆಂಗಳೂರು: ರಸ್ತೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ಲಾರಿ ಚಾಲಕರ ನಡುವಿನ ಮಾತುಕತೆ ಯಶಸ್ವಿಯಾಗಿದ್ದು, 8 ದಿನಗಳ ಮುಷ್ಕರವನ್ನು ಲಾರಿ ಚಾಲಕರು ವಾಪಸ್ ಪಡೆದಿದ್ದಾರೆ. 
ಅಖಿಲ ಭಾರತ ಮೋಟಾರ್ ಟ್ರಾನ್ಸ್ಪೋರ್ಟ್ ಕಾಂಗ್ರೆಸ್(ಎಐಎಂಟಿಸಿ) ನ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಗೆ ನೀಡಿದ್ದು ಲಾರಿ ಮುಷ್ಕರ ವಾಪಸ್ ಪಡೆದಿದ್ದಾರೆ. ಲಾರಿ ಚಲಾಕರು ಹಾಗೂ ಸರ್ಕಾರದ ನಡುವೆ ನಡೆದ ಸರಣಿ ಮಾತುಕತೆ ವಿಫಲವಾಗಿದ್ದ ಹಿನ್ನೆಲೆಯಲ್ಲಿ ಲಾರಿ ಮುಷ್ಕರ ತೀವ್ರಗೊಳ್ಳುವ ಸಾಧ್ಯತೆ ಇತ್ತು. ಇದರಿಂದಾಗಿ ಆಹಾರ ಪದಾರ್ಥಗಳ ಬೆಲೆಯೂ ಏರಿಕೆಯಾಗಿತ್ತು. ಆದರೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ​ನ ಪ್ರೀಮಿಯಂ ದರವನ್ನು ಮರುಪರಿಶೀಲಿಸುವುದಾಗಿ ಇನ್ಶೂರೆನ್ಸ್ ನಿಯಂತ್ರಣ ಅಭಿವೃದ್ಧಿ ಪ್ರಾಧಿಕಾರ(ಐಆರ್ ಡಿಎಐ) ಸರ್ಕಾರದ ಮನವಿಗೆ ಒಪ್ಪಿದ್ದು, ಲಾರಿ ಚಾಲಕರ ಬೇಡಿಕೆಯನ್ನು ಪರಿಶೀಲಿಸುವುದಾಗಿ ಹೇಳಿದೆ. 
ಥರ್ಡ್ ಪಾರ್ಟಿ ಇನ್ಶೂರೆನ್ಸ್ ​ನ ಪ್ರೀಮಿಯಂ ದರವನ್ನು ಮರುಪರಿಶೀಲನೆ ಮಾಡುವ ಸಂಬಂಧ ಶನಿವಾರ ಸಭೆ ನಡೆಯಲಿದ್ದು, ಬೇಡಿಕೆ ಈಡೇರಿಸುವ ಭರವಸೆ ದೊರೆತ ಹಿನ್ನೆಲೆಯಲ್ಲಿ ಲಾರಿ ಚಾಲಕರು ಮುಷ್ಕರವನ್ನು ವಾಪಸ್ ಪಡೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com