ನವದೆಹಲಿ: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್)ದ ಅಧ್ಯಕ್ಷ ಆರ್. ಎಸ್. ಶರ್ಮಾ ಅವರ ವೈಯಕ್ತಿಕ ಮಾಹಿತಿ ಸೋರಿಕೆ ಮಾಡಿದ ಫ್ರಾನ್ಸ್ ಮೂಲದ ಹ್ಯಾಕರ್, ಇದೀಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಧಾರ್ ಸಂಖ್ಯೆಯನ್ನು ಪ್ರಕಟಿಸುವಂತೆ ಸವಾಲು ಹಾಕಿದ್ದಾರೆ.
'ಹಾಯ್ ನಿಮ್ಮ ಆಧಾರ್ ಸಂಖ್ಯೆಯನ್ನು ಪ್ರಕಟಿಸುತ್ತೀರಾ?'(ನಿಮ್ಮಲ್ಲಿ ಇದ್ದರೆ) ಎಂದು ಹ್ಯಾಕರ್ ಹಾಗೂ ಭದ್ರತಾ ತಜ್ಞನೆಂದು ಕರೆದುಕೊಳ್ಳುವ ಎಲಿಯಟ್ ಅಲ್ಡರ್ ಸನ್ ಟ್ವಿಟರ್ ನಲ್ಲಿ ಪ್ರಧಾನಿ ಮೋದಿ ಅವರಿಗೆ ಸವಾಲು ಹಾಕಿದ್ದಾರೆ.
ಈ ಸವಾಲಿಗೆ ಪ್ರಧಾನಿ ನರೇಂದ್ರ ಮೋದಿ, ಪ್ರಧಾನಿ ಕಚೇರಿ ಮತ್ತು ಕೇಂದ್ರ ಸಚಿವಾಲಯದಿಂದ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
ಎಲಿಯಟ್ ಅವರು ಇದಕ್ಕು ಮುನ್ನ ಟ್ವಿಟರ್ ನಲ್ಲಿ ಆಧಾರ್ ಸಂಖ್ಯೆ ಪ್ರಕಟಿಸಿ ಸವಾಲು ಹಾಕಿದ್ದ ಟ್ರಾಯ್ ಅಧ್ಯಕ್ಷ ಶರ್ಮಾ ಅವರ ಮೊಬೈಲ್ ನಂಬರ್, ಪಾನ್ ಸಂಖ್ಯೆ ಸೇರಿ ಹಲವು ವೈಯಕ್ತಿಕ ಮಾಹಿತಿಗಳನ್ನು ಸಾರ್ವಜನಿಕವಾಗಿ ಟ್ವೀಟಿಸಿದ್ದರು.