ಎನ್ ಜಿಟಿ ಮುಖ್ಯಸ್ಥರ ವಜಾಗೊಳಿಸುವ ಎಲ್ ಜೆಪಿ ಬೇಡಿಕೆಗೆ ಜೆಡಿಯು ಬೆಂಬಲ: ಎನ್ ಡಿಎ ಮೈತ್ರಿಯಲ್ಲಿ ಹೊಸ ಬಿಕ್ಕಟ್ಟು

ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶ ಎಕೆ ಗೊಯೆಲ್ ಅವರನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ -ಎನ್ ಜಿ ಟಿ ಮುಖ್ಯಸ್ಥ ಸ್ಥಾನದಿಂದ ವಜಾಗೊಳಿಸುವಂತೆ ಎಲ್ ಜೆಪಿ ಇಟ್ಟಿರುವ ಬೇಡಿಕೆಯನ್ನು ಜೆಡಿಯು ಬೆಂಬಲಿಸಿದ್ದು, ಬಿಹಾರದಲ್ಲಿ ಜೆಡಿಯುನೊಂದಿಗೆ ಮೈತ್ರಿಗೆ ಬಿಜೆಪಿ ಪ್ರಮುಖ ತೊಡಕಾಗಿ ಪರಿಣಮಿಸಿದೆ.
ನಿತಿಶ್ ಕುಮಾರ್, ಅಮಿತ್ ಶಾ
ನಿತಿಶ್ ಕುಮಾರ್, ಅಮಿತ್ ಶಾ

ಪಾಟ್ನಾ : ಪರಿಶಿಷ್ಟ ಜಾತಿ, ಪಂಗಡದ ಮೇಲಿನ ದೌರ್ಜನ್ಯ ತಡೆ ಕಾಯ್ದೆ ದುರ್ಬಲ  ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್  ಮಾಜಿ ನ್ಯಾಯಾಧೀಶ ಎಕೆ ಗೊಯೆಲ್ ಅವರನ್ನು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ -ಎನ್ ಜಿ ಟಿ ಮುಖ್ಯಸ್ಥ ಸ್ಥಾನದಿಂದ ವಜಾಗೊಳಿಸುವಂತೆ ಎಲ್ ಜೆಪಿ  ಇಟ್ಟಿರುವ ಬೇಡಿಕೆಯನ್ನು ಜೆಡಿಯು ಬೆಂಬಲಿಸಿದ್ದು, ಬಿಹಾರದಲ್ಲಿ ಎನ್ ಡಿಎ ಮೈತ್ರಿಯಲ್ಲಿ  ಬಿಜೆಪಿಗೆ ಹೊಸ ಬಿಕ್ಕಟ್ಟು ಸೃಷ್ಟಿಯಾಗಿದೆ.

ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಕಾಯ್ದೆಯಲ್ಲಿ ದುರ್ಬಲಗೊಳಿಸಿರುವ ಕಾನೂನನ್ನು ಮರು ಸ್ಥಾಪಿಸಬೇಕು ಹಾಗೂ ಎನ್ ಜಿಟಿ ಮುಖ್ಯಸ್ಥರ ಸ್ಥಾನದಿಂದ ಎ. ಕೆ. ಗೊಯೆಲ್ ಅವರನ್ನು ವಜಾಗೊಳಿಸುವಂತೆ  ಎಲ್ ಜಿಪಿ ಮುಖಂಡ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವನ್ ಮಾಡುತ್ತಿರುವ ಬೇಡಿಕೆ ನ್ಯಾಯಯುತವಾಗಿದೆ ಎಂದು  ನಿತಿಶ್ ಕುಮಾರ್ ನಾಯಕತ್ವದ ಜೆಡಿಯು ಹೇಳಿದೆ.

ಎಲ್ ಜಿಪಿ ಬೇಡಿಕೆ ಸೂಕ್ಷ್ಮ ಹಾಗೂ ನ್ಯಾಯಯುತವಾಗಿದೆ. ಒಂದು ವೇಳೆ ದಲಿತರು ಎನ್ ಡಿಎಗೆ ಮತ ಚಲಾಯಿಸದಿದ್ದರೆ ಮೈತ್ರಿಯಲ್ಲಿ ಏನು ಸಂಭವಿಸಬಹುದು. ಬಡವರಿಗಾಗಿ  ಸರ್ಕಾರ ಇರೋದು, ನಾವು ಮೊದಲು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು ಎಂದು ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೆ. ಸಿ. ತ್ಯಾಗಿ ಹೇಳಿದ್ದಾರೆ.

 ವಿ. ಪಿ. ಸಿಂಗ್ ಅವರ ಮುಂದಾಳತ್ವದಲ್ಲಿ   ರಾಮ್ ವಿಲಾಸ್ ಪಾಸ್ವನ್, ಲಾಲೂ ಪ್ರಸಾದ್ ಯಾದವ್, ಶರದ್ ಯಾದವ್, ಮತ್ತಿತರ ನಾಯಕರು ಕಠಿಣ ಕಾನೂನು ರೂಪಿಸಿದ್ದಾರೆ. ಇಂತಹ ಕಾನೂನಿನಲ್ಲಿ ಬದಲಾವಣೆ  ವಿವಿಧ ರಾಜಕೀಯ ನಾಯಕರ ಪ್ರತಿಭಟನೆಗೆ ಕಾರಣವಾಗಿದೆ ಎಂದು ತ್ಯಾಗಿ ತಿಳಿಸಿದ್ದಾರೆ.

ದೇಶದ ಹಲವು ಕಡೆಗಳಲ್ಲಿ ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚಾಗುತ್ತಿವೆ. ಈ ಕಾನೂನನ್ನು ಮತ್ತಷ್ಟು ಗಟ್ಟಿಯಾಗುವಂತೆ ಮಾಡಬೇಕಾದ ಅಗತ್ಯವಿದೆ. ದಲಿತರಲ್ಲಿ ಸುರಕ್ಷತೆಯ ಭಾವ ಮೂಡಿಸಬೇಕಾದ ಅಗತ್ಯವಿದೆ ಎಂದು  ಜೆಡಿಯು ಹಿರಿಯ ನಾಯಕ ಅಶೋಕ್ ಚೌದರಿ ಹೇಳಿದ್ದಾರೆ.

ಆಗಸ್ಟ್ 9 ರೊಳಗೆ ದುರ್ಬಲಗೊಳಿಸಿರುವ ಎಸ್ ಸಿ . ಎಸ್ ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ಮೂಲರೂಪದಲ್ಲಿರುವಂತೆ ಪುನರ್ ಸ್ಥಾಪಿಸಬೇಕು ಹಾಗೂ ಎಕೆ ಗೊಯೆಲ್ ಅವರನ್ನು  ಎನ್ ಜಿಟಿ ಮುಖ್ಯಸ್ಥ ಸ್ಥಾನದಿಂದ ವಜಾಗೊಳಿಸುವಂತೆ ಎಲ್ ಜೆಪಿ ಪ್ರಧಾನಿ ನರೇಂದ್ರಮೋದಿ ನೇತೃತ್ವದ ಕೇಂದ್ರಸರ್ಕಾರಕ್ಕೆ ಗಡುವು ನೀಡಿದೆ.

 ಸುಪ್ರೀಂಕೋರ್ಟ್ ತೀರ್ಪಿಗೆ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್  ಕೂಡಾ ಅಸಮಾಧಾನವಿದೆ . ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಹಲವು ನಾಯಕರೊಂದಿಗೆ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಆದಾಗ್ಯೂ, ಆಗಸ್ಟ್ 9 ರಂದು ಕರೆ ನೀಡಿರುವ ಪ್ರತಿಭಟನೆಗೆ ಜೆಡಿಯು ಸ್ಪಷ್ಟ ಬೆಂಬಲ ವ್ಯಕ್ತಪಡಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com