ಮಲೇಷಿಯಾದಲ್ಲಿ ಅಪಹರಣವಾಗಿದ್ದ ಭಾರತೀಯನ ರಕ್ಷಣೆ, ಮೂವರು ಪಾಕ್ ಪ್ರಜೆಗಳ ಬಂಧನ

ಮಲೇಷಿಯಾದಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತೀಯನನ್ನು ರಕ್ಷಿಸಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ಮೂವರು ಪಾಕಿಸ್ತಾನಿ ಪ್ರಜೆಗಳ ಬಂಧನವಾಗಿದೆ ಎಂದು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ನವದೆಹಲಿ: ಮಲೇಷಿಯಾದಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತೀಯನನ್ನು ರಕ್ಷಿಸಲಾಗಿದ್ದು ಪ್ರಕರಣಕ್ಕೆ ಸಂಬಂಧಿಸಿ ಮೂವರು ಪಾಕಿಸ್ತಾನಿ ಪ್ರಜೆಗಳ ಬಂಧನವಾಗಿದೆ ಎಂದು ವಿದೇಶಾಂಗ ಸಚಿವ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
ಮಧ್ಯ ಪ್ರದೇಶ ಮೂಲದ ಸಂಜೀವ್ ಎನ್ನುವವರನ್ನು ಮಲೇಷಿಯಾ ರಾಯಲ್ ಪೋಲೀಸರು ರಕ್ಷಿಸಿದ್ದಾರೆ. ಇದೇ ವೇಳೆ "ರಾಯಲ್ ಮಲೇಷಿಯಾದ ಪೊಲೀಸರು ಮೂರು ಪಾಕಿಸ್ತಾನಿ ಅಪಹರಣಕಾರರನ್ನು ಬಂಧಿಸಿದ್ದಾರೆ. ಮಲೇಷಿಯಾ ಪೋಲೀಸರ ಈ ಯಶಸ್ವಿ  ಕಾರ್ಯಾಚರಣೆಗಾಗಿ ಮಲೇಷಿಯಾದಲ್ಲಿರುವ ಭಾರತಿಯ ರಾಯಭಾರಿ ಮೃದುಲ್ ಕುಮಾರ್ ಮತ್ತವರ ತಂಡ ಪ್ರಶಂಸೆಗೆ ಅರ್ಹವಾಗಿದೆ" ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
ಅಪಹರಣಕ್ಕೀಡಾಗಿದ್ದ ಭಾರತೀಯ ಮೂಲದ ವ್ಯಕ್ತಿಯು ಬಿಡಿಗಡೆಯಾಗಿದ್ದಾರೆ.ರಾಯಲ್ ಮಲೇಶಿಯನ್ ಪೋಲೀಸ್ ಕಾರ್ಯಾಚರಣೆ ನಡೆಸಿದ್ದು ಈ ಸಮಯದಲ್ಲಿ ಭಾರತೀಯ ಹೈಕಮಿಷನ್  ಮಲೇಷಿಯಾ ಪೋಲೀಸರೊಡನೆ ನಿರಂತರ ಸಂಪರ್ಕದಲ್ಲಿದ್ದರು ಎಂದು ಮಲೇಷಿಯಾದಲ್ಲಿನ ಭಾರತೀಯ ಹೈ ಕಮಿಷನರ್ ತಮ್ಮ ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ಮಲೇಷಿಯಾ ಪೋಲೀಸರ ಕಾರ್ಯಾಚರಣೆಯಲ್ಲಿ ತಮ ರಾಜ್ಯದ ವ್ಯಕ್ತಿ ಸುರಕ್ಷಿತವಾಗಿದ್ದಾರೆ. ಕೇಂದ್ರ ಸರ್ಕಾರ ಹಾಗೂ ಸುಷ್ಮಾ ಸ್ವರಾಜ್ ಶದಿಂದ ಹೊರಗಿರುವ ಭಾರತೀಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆ  ನೀಡುತ್ತಿದೆ ಎಂದು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com