ಮಹಾರಾಷ್ಟ್ರ: ಮರಾಠಾ ಮೀಸಲಾತಿಗೆ ಆಗ್ರಹಿಸಿ 5ನೇ ಆತ್ಮಹತ್ಯೆ

ಮರಾಠಾ ಪ್ರತ್ಯೇಕ ಮೀಸಲಾತಿ ಬೇಡಿಕೆಗಾಗಿ ನದೆಯುತ್ತಿರುವ ಪ್ರತಿಭಟನೆ ದಿನ ದಿನಕ್ಕೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಮಂಗಳವಾರ ನದೆದ ಪ್ರತಿಭಟನೆ ವೇಳೆ ಮಹಾರಾಷ್ತ್ರದ ಬೀಡ್ ಜಿಲ್ಲೆಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: ಮರಾಠಾ ಪ್ರತ್ಯೇಕ ಮೀಸಲಾತಿ ಬೇಡಿಕೆಗಾಗಿ ನದೆಯುತ್ತಿರುವ ಪ್ರತಿಭಟನೆ ದಿನ ದಿನಕ್ಕೆ ಉಗ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಮಂಗಳವಾರ ನದೆದ ಪ್ರತಿಭಟನೆ ವೇಳೆ ಮಹಾರಾಷ್ತ್ರದ ಬೀಡ್ ಜಿಲ್ಲೆಯ 35  ವರ್ಷದ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕೇಜ್ ತಹಶೀಲ್ ನ ವೀದಾ ಗ್ರಾಮದ ಅಭಿಜೀತ್ ದೇಶಮುಖ್ ತನ್ನ ಮನೆ ಸಮೀಪದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈತ ಆತ್ಮಹತ್ಯೆಗೆ ಮುನ್ನ ಬರೆದ ಡೆತ್ ನೋಟ್ ನಲ್ಲಿ ತಾನು ಮರಾಠಾ ಸಮುದಾಯಕ್ಕೆ ಮೀಸಲಾತಿ ದೊರಕಿಸುವ ಸಲುವಾಗಿ ನಡೆಯುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಈ ಕಠಿಣ ತೀರ್ಮಾನ ತೆಗೆದುಕೊಳ್ಳುತ್ತಿದ್ದೇನೆ ಎಂದು ಬರೆದಿದಾನೆ. ಅಲ್ಲದೆ ನಿರುದ್ಯೋಗ ಮತ್ತು  ಬ್ಯಾಕ್ ಸಾಲದ ಸಮಸ್ಯೆಗಳನ್ನು ಸಹ ಆತ ತನ್ನ ಡೆತ್ ನೋಟ್ ನಲ್ಲಿ ವಿವರಿಸಿದ್ದಾಗಿ ಬೀಡ್ ಸಬ್ ಇನ್ಸ್ ಪೆಕ್ಟರ್ ಜಿ. ಶ್ರೀಧರ್ ಪಿಟಿಐಗೆ ತಿಳಿಸಿದ್ದಾರೆ.
ಇದು ಮರಾಠಾ ಮೀಸಲಾತಿಗಾಗಿ ನಡೆದ ಪ್ರತಿಭಟನೆಯಲ್ಲಿ ಇದುವರೆಗಿನ ಐದನೇ ಆತ್ಮಹತ್ಯೆ ಪ್ರಕರಣವೆಂದು ಇನ್ನೋರ್ವ ಪೋಲೀಸಾಧಿಕಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com