ರಾಜೀವ್ ಗಾಂಧಿಯವರ ಅಸ್ಸಾಂ ಒಪ್ಪಂದವೂ ಎನ್ ಆರ್ ಸಿಯ ಉದ್ದೇಶವನ್ನೇ ಹೊಂದಿತ್ತು: ಅಮಿತ್ ಶಾ

ಎನ್ ಆರ್ ಸಿ (ನಾಗರಿಕರ ರಾಷ್ಟ್ರೀಯ ನೋಂದಣಿ) ಗೆ ವಿರೋಧ ವ್ಯಕ್ತಪಡಿಸಿ ಸಂಸತ್ ಕಲಾಪದಲ್ಲಿ ಗದ್ದಲ ಉಂಟು ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ...
ಅಮಿತ್ ಶಾ
ಅಮಿತ್ ಶಾ
Updated on: 
ನವದೆಹಲಿ: ಎನ್ ಆರ್ ಸಿ (ನಾಗರಿಕರ ರಾಷ್ಟ್ರೀಯ ನೋಂದಣಿ) ಗೆ  ವಿರೋಧ ವ್ಯಕ್ತಪಡಿಸಿ ಸಂಸತ್ ಕಲಾಪದಲ್ಲಿ ಗದ್ದಲ ಉಂಟು ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ರಾಜ್ಯಸಭೆಯಲ್ಲಿ ತಿರುಗೇಟು ನೀಡಿದ್ದು, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಅಸ್ಸಾಂ ಒಪ್ಪಂದವೂ ಸಹ ಎನ್ ಅರ್ ಸಿಯ ಉದ್ದೇಶವನ್ನೇ ಹೊಂದಿತ್ತು ಎಂದು ಹೇಳಿದ್ದಾರೆ. 
ಎನ್ಆರ್​ಸಿ (ನಾಗರಿಕರ ರಾಷ್ಟ್ರೀಯ ನೋಂದಣಿ) ಕರಡಿನ ಬಗ್ಗೆ ಸಂಸತ್ ನಲ್ಲಿ ಜು.31  ರ ಕಲಾಪದಲ್ಲೂ ಚರ್ಚೆ ಮುಂದುವರೆದಿದೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದರು ಎನ್ ಆರ್ ಸಿ ಕರಡನ್ನು ವಿರೋಧಿಸಿದ್ದು, ಗದ್ದಲ ಉಂಟು ಮಾಡಿದ್ದಾರೆ. ಕಾಂಗ್ರೆಸ್ ಸದಸ್ಯರ ಗದ್ದಲಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ವೆಂಕಯ್ಯ ನಾಯ್ಡು, ಕಾಂಗ್ರೆಸ್ಸಿನ ಹಿರಿಯ ಸದಸ್ಯರು ಪ್ರಜಾಪ್ರಭುತ್ವದ ಅವಹೇಳನ ಮಾಡುತ್ತಿದ್ದಾರೆ. ದೇವರೇ ಪ್ರಜಾಪ್ರಭುತ್ವವನ್ನು ಕಾಪಾಡಬೇಕು ಎಂದು ಹೇಳಿದ್ದಾರೆ. 
ಇದೇ ವೇಳೆ ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸದಸ್ಯರಿಗೆ ಉತ್ತರ ನೀಡಿರುವ ಅಮಿತ್ ಶಾ, 1985 ರಲ್ಲಿ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅಸ್ಸಾಂ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅದರಲ್ಲಿರುವ ಅಂಶಗಳೇ ಎನ್ ಆರ್ ಸಿಯಲ್ಲೂ ಇದೆ. ಆದರೆ ಅದನ್ನು ಜಾರಿಗೊಳಿಸಲು ಕಾಂಗ್ರೆಸ್ಸಿಗರಿಗೆ ಧೈರ್ಯ ಇರಲಿಲ್ಲ, ಆ ಕೆಲಸವನ್ನು ನಾವು ಮಾಡುತ್ತಿದ್ದೆವೆ ಎಂದು ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡುತ್ತಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com