ಹದಿಹರೆಯದ ಮುಸ್ಲಿಂ ಜೋಡಿ ಒಟ್ಟಿಗೆ ವಾಸಿಸಲು ಕೇರಳ ಹೈಕೋರ್ಟ್ ಅವಕಾಶ

ಸಾಮಾಜಿಕ ನಿಷೇಧದ ನಡುವೆಯೂ ಇಸ್ಲಾಂ ಧರ್ಮಕ್ಕೆ ಸೇರಿದ 18 ವರ್ಷದ ಯುವಕ ಹಾಗೂ 19 ವರ್ಷದ ಯುವತಿ ಒಟ್ಟಿಗೆ ವಾಸಿಸಲು ಕೇರಳ ಹೈಕೋರ್ಟ್ ಅವಕಾಶ ಮಾಡಿಕೊಟ್ಟಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಕೊಚ್ಚಿ: ಸಾಮಾಜಿಕ ನಿಷೇಧದ ನಡುವೆಯೂ  ಇಸ್ಲಾಂ ಧರ್ಮಕ್ಕೆ ಸೇರಿದ 18 ವರ್ಷದ ಯುವಕ ಹಾಗೂ 19 ವರ್ಷದ ಯುವತಿ  ಒಟ್ಟಿಗೆ ವಾಸಿಸಲು ಕೇರಳ ಹೈಕೋರ್ಟ್  ಅವಕಾಶ ಮಾಡಿಕೊಟ್ಟಿದೆ.

19 ವರ್ಷದ ತಮ್ಮ ಮಗಳನ್ನು 18 ವರ್ಷದ ಯುವಕ ಬಂಧನದಲ್ಲಿರಿಸಿದ್ದು, ಆಕೆಯನ್ನು ಹಾಜರುಪಡಿಸುವಂತೆ ಪೊಲೀಸರಿಗೆ ನಿರ್ದೇಶನ ನೀಡುವಂತೆ  ಮೊಹಮ್ಮದ್ ರಿಯಾದ್ ಸಲ್ಲಿಸಿದ್ದ  ಅರ್ಜಿಯನ್ನು   ನ್ಯಾಯಾಧೀಶರಾದ  ವಿ. ಚಿತಾಂಬರೇಶ್,  ಕೆ. ಪಿ. ಜ್ಯೋತೀಂದ್ರನಾಥ್  ಅವರಿದ್ದ ಪೀಠ ವಜಾಗೊಳಿಸಿದ್ದು,  ಮಹತ್ವಪೂರ್ಣವಾದ ತೀರ್ಪನ್ನು ಪ್ರಕಟಿಸಿದೆ.

ಮದುವೆಯಾಗಲು ಕಾನೂನು ಪ್ರಕಾರ ವಯಸ್ಸು ಆಗದಿದ್ದರೂ  ಯುವಕರು  ಒಟ್ಟಿಗೆ ವಾಸಿಸುವ ಹಕ್ಕನ್ನು ಪಡೆದಿರುತ್ತಾರೆ ಎಂದು ಸುಪ್ರೀಂಕೋರ್ಟ್ ಇತ್ತೀಚಿಗೆ  ತೀರ್ಪು ನೀಡಿತ್ತು.

ಲೈವ್-ಇನ್ ಸಂಬಂಧಗಳು ನಮ್ಮ ಸಮಾಜದಲ್ಲಿ ಅತಿರೇಕವಾಗಿವೆ ಮತ್ತು ಹೆಬಿಯಸ್ ಕಾರ್ಪಸ್ ರಿಟ್ ಸಮಸ್ಯೆಯಿಂದಾಗಿ ಅವರನ್ನು ಬೇರ್ಪಡಿಸಲಾಗುವುದಿಲ್ಲ ಎಂಬ ಅಂಶಕ್ಕೆ ಕಣ್ಣು ಮುಚ್ಚಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಬಾಲಕಿ ಮದುವೆಯ ಹಂತಕ್ಕೆ ಬಂದಾಗ   ಆ ಯುವಕನೊಂದಿಗೆ ಮದುವೆಯಾಗಲು ಅಥವಾ  ಒಟ್ಟಿಗೆ ವಾಸಿಸುವ ಸಂಪೂರ್ಣವಾದ ಹಕ್ಕನ್ನು ಪಡೆಯುತ್ತಾಳೆ ಎಂದು ನ್ಯಾಯಾಲಯ ಹೇಳಿದೆ. ಕಾನೂನು ಪ್ರಕಾರ  ಮದುವೆಯಾಗದಿದ್ದರೂ  ಲೀನ್ ಇನ್ ಸಂಬಂಧದ ಮೂಲಕ ಪ್ರಾಯೋಗಿಕವಾಗಿ  ದಾಂಪತ್ಯ ಜೀವನದ ಅನುಭವ ಪಡೆಯಬಹುದಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಕಾನೂನು ಪ್ರಕಾರ ಮದುವೆ ವಯಸ್ಸಿಗೆ ಬಂದ ನಂತರ  ತನ್ನ ಮಗಳೊಂದಿಗೆ  ಆ ಯುವಕ ವಾಸಿಸಲು ಅವಕಾಶ ಮಾಡಿಕೊಡಲಾಗುವುದು ಆದರೆ, ಲಿವ್ ಇನ್ ಸಂಬಂಧಕ್ಕೆ ಅವಕಾಶ ನೀಡುವುದಿಲ್ಲ ಎಂದು  ಯುವತಿ ತಂದೆ ನ್ಯಾಯಾಲಯಕ್ಕೆ ಹೇಳಿದರು.

ಆ ಯುವತಿಗೆ ಇನ್ನೂ 21 ವರ್ಷ ತುಂಬಿಲ್ಲ. ಬಾಲ್ಯ ವಿವಾಹ ಕಾಯ್ದೆ ನಿರ್ಬಂಧ ಕಾಯ್ದೆ 2006ರ  ಸೆಕ್ಷನ್  2ರ ರ ಅಡಿ   ಬಾಲಕಿ ಎಂದು ಪರಿಗಣಿಸಬೇಕೆಂದು  ಯುವತಿ ತಂದೆ ವಾದಿಸಿದರು. ಕಾನೂನು ದೃಷ್ಟಿಯಲ್ಲಿ ಅವರಿಬ್ಬರೂ  ಮದುವೆಯಾಗುವ ವಯಸ್ಸು ಆಗಿಲ್ಲ ಎಂದು ಹೇಳಿದರು.

ಸೆಕ್ಷನ್ 251 ರ ಅಡಿ  ಕಾನೂನು ಪ್ರಕಾರ ಮೊಹಮ್ಮದ್ ನನ್ನು  ವಿವಾಹವಾಗಲು  ಆ ಯುವತಿಗೆ ಅವಕಾಶವಿದೆ ಎಂಬುದನ್ನು ಮನಗಂಡ ನ್ಯಾಯಾಲಯ, ಆಕೆ ಪ್ರಾಪ್ತ ವಯಸ್ಸಿಗೆ ಬಂದಿದ್ದು,  ಒಟ್ಟಿಗೆ ಬಾಳುವ ಅವಕಾಶ ಪಡೆಯಬಹುದಾಗಿದೆ ಎಂದು ತೀರ್ಪು ನೀಡಿತು.

ಲೈವ್-ಇನ್ ಸಂಬಂಧವು ಶಾಸಕಾಂಗದ ಮೂಲಕ ಶಾಸನಬದ್ಧವಾಗಿ ಮಾನ್ಯತೆ ಪಡೆದಿದ್ದರಿಂದ ಆ  ಹುಡುಗಿಗೆ ತನ್ನ ವಿವಾಹದ ಹೊರಗೆ  ಯುವಕನೊಂದಿಗೆ  ಬದುಕುವ  ಹಕ್ಕಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com