ಉತ್ತರ ಪ್ರದೇಶ: ಅಧಿಕೃತ ಸರ್ಕಾರಿ ನಿವಾಸವನ್ನು ಖಾಲಿ ಮಾಡಿದ ಅಖಿಲೇಶ್ ಯಾದವ್

ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶನಿವಾರ ತಮ್ಮ ಅಧಿಕೃತ ಸರ್ಕಾರಿ ನಿವಾಸವನ್ನು ತೆರವುಗೊಳಿಸಿದ್ದಾರೆ.
ಉತ್ತರ ಪ್ರದೇಶ: ಅಧಿಕೃತ ನಿವಾಸವನ್ನು ಖಾಲಿ ಮಾಡಿದ ಅಖಿಲೇಶ್ ಯಾದವ್
ಉತ್ತರ ಪ್ರದೇಶ: ಅಧಿಕೃತ ನಿವಾಸವನ್ನು ಖಾಲಿ ಮಾಡಿದ ಅಖಿಲೇಶ್ ಯಾದವ್
ಲಖನೌ(ಉತ್ತರ ಪ್ರದೇಶ): ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಶನಿವಾರ  ತಮ್ಮ ಅಧಿಕೃತ ಸರ್ಕಾರಿ ನಿವಾಸವನ್ನು ತೆರವುಗೊಳಿಸಿದ್ದಾರೆ.
ಅಖಿಲೇಶ್ ಇದೀಗ ಸುಲ್ತಾನ್ ಪುರ ರಸ್ತೆಯಲ್ಲಿರುವ ಅನ್ಸಾಲ್ ಎಪಿಐಟೌನ್ ಶಿಪ್ ನಲ್ಲಿ  ನೆಲೆಸಲಿದ್ದಾರೆ. ಅಖಿಲೇಶ್ ಹಾಗೂ ಮುಲಾಯಂ ಸಿಂಗ್ ಯಾದವ್ ಸರ್ಕಾರಿ ಬಂಗಲೆ ತೊರೆಯುವಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ನೀಡಿದ್ದ ಹಿನ್ನೆಲೆಯಲ್ಲಿ ಅಖಿಲೇಶ್ ನಿವಾಸ ಬದಲಾವಣೆ ಮಾಡಿದ್ದಾರೆ.
ಎರಡಂತಸ್ತಿನ ವಿಲ್ಲಾವನ್ನು ಅವರು ತಮ್ಮ ಲಛೇರಿ ಕೆಲಸಗಳಿಗೆ ಸಹ ಬಳಸಲು ಅನುಕೂಲವಾಗಿದ್ದು ,ನೆಲಮಹಡಿಯಲ್ಲಿ ಹಾಲ್ ಮತ್ತು ಕೊಠಡಿಯನ್ನು ಹೊಂದಿರುತ್ತದೆ. ಇದೇ ವೇಳೆ  ಅಖಿಲೇಶ್ ಅವರ ತಂದೆ ಮುಲಾಯಂ ಸಿಂಗ್ ಅವರಿಗಾಗಿ ವಿಲ್ಲಾ ಸಂಖ್ಯೆ 12ಎ ಅನ್ನು ನವೀಕರಣಗೊಳಿಸಲಾಗಿದೆ.
ರಾಜ್ಯದ ಮಾಜಿ ಮುಖ್ಯಮಂತ್ರಿಗಳಿಗೆ ಶಾಶ್ವತ ವಸತಿ ವ್ಯವಸ್ಥೆಯನ್ನು ನೀಡಬೇಕೆನ್ನುವ ಅಂದಿನ ಅಖಿಲೇಶ್ ಯಾದವ್ ಸರ್ಕಾರ ಮಾಡಿದ್ದ ಆದೇಶಕ್ಕೆ 2016 ರ ಮೇ ನಲ್ಲಿ ಸರ್ವೋಚ್ಚ ನ್ಯಾಯಾಲಯ ತಡೆ ನೀಡಿತ್ತು.ರಾಜ್ಯದ ಮಾಜಿ ಮುಖ್ಯಮಂತ್ರಿಗಳು ಸರ್ಕಾರಿ ಬಂಗಲೆಯಲ್ಲಿ ವಾಸಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.
ಇದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದ ಆರು ಮಾಜಿ ಮುಖ್ಯಮಂತ್ರಿಗಳಿಗೆ ತಾವು ಸರ್ಕಾರಿ ಬಂಗಲೆಗಳನ್ನು ತೆರವುಗೊಳಿಸಬೇಕೆಂದು ನೀಓಟೀಸ್ ಜಾರಿ ಮಾಡಿದ್ದರು. ಮುಲಾಯಂ ಸಿಂಗ್ ಯಾದವ್, ಮಾಯಾವತಿ, ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಅವರೂ ಸೇರಿ ಹಲವರಿಗೆ ನೋಟೀಸ್ ನೀಡಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com