ಮಧ್ಯಪ್ರದೇಶದ ಪ್ರೋಫೆಸರ್ ಒಬ್ಬರು ಮಾಡಿರುವ ಡ್ಯಾನ್ಸ್ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಧೂಳೆಬಿಸಿದೆ.
ಡ್ಯಾನ್ಸಿಂಗ್ ಅಂಕಲ್ ಎಂಬ ಅಡಿಬರಹದೊಂದಿಗೆ ವಿಡಿಯೋವನ್ನು ಸಾಮಾಜಿಕ ಜಾಲತಾಣಕ್ಕೆ ಅಪ್ ಮಾಡಿದ್ದು ಇದೀಗ ಈ ವಿಡಿಯೋ ರಾತ್ರೋರಾತ್ರಿ ವೈರಲ್ ಆಗಿದೆ. ಅಲ್ಲದೆ ಟ್ವೀಟರ್ ನಲ್ಲಿ ಅಂಕಲ್ ಡ್ಯಾನ್ಸ್ ಗೆ ಯಾರು ಸರಿಸಾಟಿಯಿಲ್ಲ ಎಂಬ ರೀತಿಯಲ್ಲಿ ಸಂದೇಶಗಳನ್ನು ಬರೆಯುತ್ತಿದ್ದಾರೆ.
ಡ್ಯಾನ್ಸಿಂಗ್ ಅಂಕಲ್ ಎಂದೇ ಖ್ಯಾತರಾಗಿರುವ 40ರ ಹರೆಯದ ಸಂಜೀವ್ ಶ್ರೀವಾತ್ಸವ್ ಅವರು ಭೋಪಾಲ್ ನ ಬಾಬಾ ಇಂಜಿನಿಯರಿಂಗ್ ಸಂಶೋಧನಾ ಸಂಸ್ಥೆಯಲ್ಲಿ ಎಲೆಕ್ಟ್ರಾನಿಕ್ಸ್ ಡಿಪಾರ್ಟ್ಮೆಂಟ್ನಲ್ಲಿ ಪ್ರೋಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸಂಬಂಧಿಕರೊಬ್ಬರ ಮದುವೆಯಲ್ಲಿ ಸಂಜೀವ್ ಶ್ರೀವಾತ್ಸವ್ ಅವರು ಡ್ಯಾನ್ಸ್ ಮಾಡಿದ್ದರು. ಈ ವಿಡಿಯೋ ಇದೀಗ ವೈರಲ್ ಆಗಿದೆ. 1987ರಲ್ಲಿ ಬಾಲಿವುಡ್ ನಟ ಗೋವಿಂದಾ ಅಭಿನಯದ ಖುದ್ಗರ್ಜ್ ಚಿತ್ರದ ಆಪ್ ಕೆ ಆ ಜಾನೆ ಸೆ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಮೇ 30ರಂದು ಟ್ವೀಟ್ ಮಾಡಲಾದ ವಿಡಿಯೋವನ್ನು ಸಾವಿರಾರೂ ಮಂದಿ ರೀ ಟ್ವೀಟ್ ಮಾಡಿದ್ದು 10 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ.
Has everyone in India by now seen this video of the amazing #DancingUncle (at a wedding presumably)? Insta, FB, WhatsApp, Twitter - no matter what platform I’m on, he’s everywhere!