ಪ್ರಧಾನಿ ಮೋದಿ ಅವರ ನೇತೃತ್ವದ ಕೊನೆಯ ನಾಲ್ಕು ವರ್ಷಗಳಲ್ಲಿ ಈ ಪ್ರವೃತ್ತಿ ಇತ್ತು. ಗುಜರಾತ್ ಹೊರತು ಎಲ್ಲ ಚುನಾವಣೆಗಳಲ್ಲಿ, ಈಗಿರುವ ಸರ್ಕಾರವನ್ನು ಬದಲಿಸಲು ಜನರು ನಿರ್ಧರಿಸಿದ್ದರಿಂದ ಜನಾದೇಶ ಸರ್ಕಾರದ ವಿರುದ್ಧವಾಗಿರುತ್ತಿತ್ತು. ಇದು ಜಮ್ಮು ಮತ್ತು ಕಾಶ್ಮೀರ, ಪಂಜಾಬ್, ಉತ್ತರ ಪ್ರದೇಶ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಅಸ್ಸಾಂ, ಮಹಾರಾಷ್ಟ್ರ ಮತ್ತು ತ್ರಿಪುರದಲ್ಲಿ ಸಹ ಘಟಿಸಿದೆ. ಆದರೆ ಗುಜರಾತಿನಲ್ಲಿ ಮಾತ್ರ ಮತ್ತೆ ಬಿಜೆಪಿ ಅಧಿಕಾರಕ್ಕೆ ಏರಿದೆ.