ರಾಂಚಿಯಲ್ಲಿ ಕಿರಿಯ ವೈದ್ಯರು, ದಾದಿಯರ ಮುಷ್ಕರ: 12 ರೋಗಿಗಳ ಸಾವು

ರೋಗಿಯೊಬ್ಬರ ಕುಟುಂಬದವರೊಂದಿಗೆ ಕಲಹವೇರ್ಪಟ್ಟು ಕಿರಿಯ ವೈದ್ಯರು ಮತ್ತು ದಾದಿಯರು ಮುಷ್ಕರ ...
ಆಸ್ಪತ್ರೆಯ ಆವರಣ
ಆಸ್ಪತ್ರೆಯ ಆವರಣ

ರಾಂಚಿ: ರೋಗಿಯೊಬ್ಬರ ಕುಟುಂಬದವರೊಂದಿಗೆ ಕಲಹವೇರ್ಪಟ್ಟು ಕಿರಿಯ ವೈದ್ಯರು ಮತ್ತು ದಾದಿಯರು ಮುಷ್ಕರ ನಡೆಸಿದ್ದರಿಂದ ಚಿಕಿತ್ಸೆಯಲ್ಲಿ ನಿರ್ಲಕ್ಷ್ಯತೆಯಿಂದ ಕನಿಷ್ಠ 12 ರೋಗಿಗಳು ಮೃತಪಟ್ಟಿರುವ ಘಟನೆ ಜಾರ್ಖಂಡ್ ನ ರಾಂಚಿಯಲ್ಲಿರುವ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದಿದೆ.

ಮುಷ್ಕರ ನಡೆಸಿದ ಕಿರಿಯ ವೈದ್ಯರು ಮತ್ತು ದಾದಿಯರು ಆಸ್ಪತ್ರೆಯ ತುರ್ತು ವಾರ್ಡ್ ನಲ್ಲಿ ಚಿಕಿತ್ಸೆ ತಡೆಹಿಡಿದರು.ಯಾವ ರೋಗಿಗಳನ್ನು ಒಳಗೆ ಹೋಗಲು ಬಿಡಲಿಲ್ಲ. ದಾದಿಯರ ಮೇಲೆ ಹಲ್ಲೆ ನಡೆಸಿದವರನ್ನು ಕೂಡಲೇ ಬಂಧಿಸಿ ವೈದ್ಯಕೀಯ ರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.

ಗೀತಾ ದೇವಿ ಎಂಬ ರೋಗಿಯ ಕುಟುಂಬಸ್ಥರು ಮೊನ್ನೆ ಶುಕ್ರವಾರ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು. ಸೂಕ್ತ ಚಿಕಿತ್ಸೆ ನೀಡಲಿಲ್ಲವೆಂದು ನಿನ್ನೆ ಗೀತಾಳ ಕುಟುಂಬಸ್ಥರು ಮತ್ತು ದಾದಿಯರು, ಕಿರಿಯ ವೈದ್ಯರ ಮಧ್ಯೆ ಕಲಹವೇರ್ಪಟ್ಟು ಗೀತಾಳ ಕಡೆಯವರು ದಾದಿಯರ ಮೇಲೆ ಹಲ್ಲೆ ನಡೆಸಿ ನಾಲ್ವರು ದಾದಿಯರಿಗೂ ಗಾಯವಾಗಿದೆ ಎಂದು ಹೇಳಲಾಗಿದೆ. ಆದರೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸುತ್ತಾರೆ ಕಿರಿಯ ವೈದ್ಯಕ ಸಂಘದ ಅಧ್ಯಕ್ಷೆ ರಮ್ರೇಖ ರೈ. ತಮ್ಮ ಬೇಡಿಕೆ ಈಡೇರಿದ ನಂತರವಷ್ಟೇ ಕರ್ತವ್ಯಕ್ಕೆ ಮರಳುವುದಾಗಿ ಕಿರಿಯ ವೈದ್ಯರು ತಿಳಿಸಿದ್ದಾರೆ.

ರಾಜ್ಯ ಆರೋಗ್ಯ ಸಚಿವ ರಾಮಚಂದ್ರ ಚಂದ್ರವಂಶಿ ಮತ್ತು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ನಿಧಿ ಕಾರೆ ಕೂಡಲೇ ಮಧ್ಯ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ಒತ್ತಾಯಿಸಿದ್ದಾರೆ.

ಈ ಮಧ್ಯೆ ಆಸ್ಪತ್ರೆ ಆಡಳಿತಾಧಿಕಾರಿಗಳು ದಾದಿಯರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಯತ್ನಿಸುವುದಾಗಿ ಹೇಳಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆಗೆ ತೊಂದರೆಯಾಗದಂತೆ ಬದಲಿ ಹಿರಿಯ ವೈದ್ಯರುಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com