ಈ ಘಟನೆ ತಿಳಿಯುತ್ತಿದ್ದಂತೆಯೇ ಮಾರಿಷಸ್ ನ ಎಟಿಸಿ ವಿಮಾನವನ್ನು ಪತ್ತೆ ಮಾಡುವ ಅನಿಶ್ಚಿತತೆ ಕೋಡ್ "INCERFA" ನ್ನು ಬಳಕೆ ಮಾಡಿದ್ದು, ಈ ವೇಳೆ ವಿಮಾನ ಪತ್ತೆಯಾಗಿದೆ. ಸಾಮಾನ್ಯವಾಗಿ ಯಾವುದೇ ವಿಮಾನ ಸಂಪರ್ಕ ಸಾಧಿಸಲು ಸಾಧ್ಯವಾಗದೇ ಇದ್ದಲ್ಲಿ INCERFA ನ್ನು ಬಳಕೆ ಮಾಡುವುದಕ್ಕೆ ಸುಮಾರು 30 ನಿಮಿಷಗಳ ಕಾಲಾವಧಿ ಇರುತ್ತದೆ. ಆದರೆ ಸುಷ್ಮಾ ಸ್ವರಾಜ್ ವಿಮಾನ ಸಂಪರ್ಕ ಸಾಧ್ಯವಾಗದೇ ಇದ್ದಾಗ ಈ ಕಾಲಾವಧಿಗೂ ಮುನ್ನವೇ INCERFA ನ್ನು ಬಳಕೆ ಮಾಡಲಾಗಿದ್ದು, ವಿಮಾನ ಸುರಕ್ಷಿತವಾಗಿ ಮಾರಿಷಸ್ ನಲ್ಲಿ ಲ್ಯಾಂಡ್ ಆಗಿದೆ.