ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ
ದೇಶ
ಪಾಕ್ ಜೊತೆ ಡಿಜಿಎಂಒ ಮತ್ತೆ ಮಾತುಕತೆ ನಡೆಸಿ, ರಕ್ತಪಾತಕ್ಕೆ ಅಂತ್ಯ ಹಾಡಬೇಕು; ಸಿಎಂ ಮೆಹಬೂಬಾ ಮುಫ್ತಿ
ಪಾಕಿಸ್ತಾನದ ಜೊತೆಗೆ ಡಿಜಿಎಂಒ ಮತ್ತೆ ಮಾಡುಕತೆ ನಡೆಸಿ ಗಡಿಯಲ್ಲಿ ನಡೆಯುತ್ತಿರುವ ರಕ್ತಪಾತಕ್ಕೆ ಅಂತ್ಯ ಹಾಡಬೇಕೆಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಭಾನುವಾರ ಹೇಳಿದ್ದಾರೆ...
ಶ್ರೀನಗರ; ಪಾಕಿಸ್ತಾನದ ಜೊತೆಗೆ ಡಿಜಿಎಂಒ ಮತ್ತೆ ಮಾಡುಕತೆ ನಡೆಸಿ ಗಡಿಯಲ್ಲಿ ನಡೆಯುತ್ತಿರುವ ರಕ್ತಪಾತಕ್ಕೆ ಅಂತ್ಯ ಹಾಡಬೇಕೆಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಭಾನುವಾರ ಹೇಳಿದ್ದಾರೆ.
ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೆ ಇಬ್ಬರು ಯೋಧರು ಹುತಾತ್ಮರಾಗಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಘಟನೆ ನಿಜಕ್ಕೂ ದುರಾದೃಷ್ಟಕರ. ಭಾರತ ಹಾಗೂ ಪಾಕಿಸ್ತಾನದ ಡಿಜಿಎಂಒ ಮಾತುಕತೆ ಬಳಿಕವೂ ಗಡಿಯಲ್ಲಿ ಉದ್ನಿಗ್ನ ವಾತಾವರಣ ನಿರ್ಮಾಣವಾಗಿದೆ. ಎರಡೂ ದೇಶದ ಗಡಿಯಲ್ಲಿಯೂ ಸಾವುಗಳು ಸಂಭವಿಸುತ್ತಿವೆ ಇದು ದುರಾದೃಷ್ಟಕರ ಸಂಗತಿ ಎಂದು ಹೇಳಿದ್ದಾರೆ.
ಗಡಿಯಲ್ಲಿ ಶಾಂತಿ ಸ್ಥಾಪಿಸಲು ಡಿಜಿಎಂಒ ಮತ್ತೆ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು. ಗಡಿಯಲ್ಲಿ ನಡೆಯುತ್ತಿರುವ ಈ ರಕ್ತಪಾತಗಳು ಕೂಡಲೇ ನಿಲ್ಲುವಂತೆ ಮಾಡಬೇಕೆಂದು ತಿಳಿಸಿದ್ದಾರೆ.
ಭಾರತ ಪಾಕಿಸ್ತಾನದ ಗಡಿಯಲ್ಲಿ ಪದೇ ಪದೇ ಕದನ ವಿರಾಮ ಉಲ್ಲಂಘನೆಯಾಗುತ್ತಿರುವ ಹಿನ್ನಲೆಯಲ್ಲಿ ಮೇ.29 ರಂದು ಉಭಯ ರಾಷ್ಟ್ರಗಳ ಮಿಲಿಟರಿ ಕಾರ್ಯಾಚರಣೆಗಳ ನಿರ್ದೇಶಕರು ಹಾಟ್ ಲೈನ್ ಸಂಪರ್ಕದ ಮೂಲಕ ಮಾತುಕತೆ ನಡೆಸಿದ್ದರು.
ಈ ವೇಳೆ 2003ರ ಕದನ ವಿರಾಮ ಒಪ್ಪಂದದಂತೆ ಸಂಪೂರ್ಣ ಕದನ ವಿರಾಮ ಪಾಲಿಸಲು ಉಭಯ ರಾಷ್ಟ್ರಗಳ ಡಿಜಿಎಂಒಗಳು ನಿರ್ಧರಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ