ಆರ್'ಎಸ್ಎಸ್ ಸಮಾವೇಶ ದೇಶದಲ್ಲಿ ಅಹಿತಕರ ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಲಿದೆ: ವೀರಪ್ಪ ಮೊಯ್ಲಿ
ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸಿರುವ ಸಮಾವೇಶಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಪಾಲ್ಗೊಳ್ಳುವುದರಿಂದ ದೇಶದಲ್ಲಿ ಅಹಿತಕರ ವ್ಯತ್ಯಾಸಗಳು ಸೃಷ್ಟಿಯಾಗಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿಯವರು ಸೋಮವಾರ ಹೇಳಿದ್ದಾರೆ...
ನವದೆಹಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಆಯೋಜಿಸಿರುವ ಸಮಾವೇಶಕ್ಕೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರು ಪಾಲ್ಗೊಳ್ಳುವುದರಿಂದ ದೇಶದಲ್ಲಿ ಅಹಿತಕರ ವ್ಯತ್ಯಾಸಗಳು ಸೃಷ್ಟಿಯಾಗಲಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಎಂ.ವೀರಪ್ಪ ಮೊಯ್ಲಿಯವರು ಸೋಮವಾರ ಹೇಳಿದ್ದಾರೆ.
ಈ ಕುರಿತಂತೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಆರ್'ಎಸ್ಎಸ್ ಸಮಾವೇಶಕ್ಕೆ ಪ್ರಣಬ್ ಮುಖರ್ಜಿಯವರು ಅತಿಥಿಯಾಗಿ ಹೋಗುವುದರಿಂದ ಆಕ್ಷೇಪಣೀಯ ಪರಿಸ್ಥಿತಿಗಳು ಎದುರಾಗಲಿದೆ ಎಂದು ಹೇಳಿದ್ದಾರೆ.
ನಾಗ್ಪುರದಲ್ಲಿ ಜೂನ್.7 ರಂದು ರಾಷ್ಟ್ರೀಯ ಸಮಾಜಸೇವಕ ಸಂಘ ಸಮಾವೇಶವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರುವಂತೆ ಪ್ರಣಬ್ ಮುಖರ್ಜಿಯವರಿಗೆ ಆಹ್ವಾನ ಪತ್ರಿಕೆಯನ್ನು ರವಾನಿಸಿತ್ತು.
ಈ ಆಹ್ವಾನ ಪತ್ರಿಕೆಯನ್ನು ಪ್ರಣಬ್ ಮುಖರ್ಜಿಯವರು ಸ್ವೀಕರಿಸಿದ್ದರು. ಪ್ರಣಬ್ ಮುಖರ್ಜಿಯವರು ಸಮಾವೇಶದಲ್ಲಿ ಪಾಲ್ಗೊಳ್ಳುವುದರ ಕುರಿತಂತೆ ಇದೀಗ ಹಲವು ಪರ ಹಾಗೂ ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗತೊಡಗಿವೆ.