ಉತ್ತರ ಪ್ರದೇಶದಿಂದ ಪತಂಜಲಿ ಫುಡ್ ಪಾರ್ಕ್ ಯೋಜನೆ ಸ್ಥಳಾಂತರ: ಯೋಗಿ ಸರ್ಕಾರದ ಬಗ್ಗೆ ಬಾಬಾ ಅಸಮಾಧಾನ!

ಉತ್ತರ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಪತಂಜಲಿ ಫುಡ್ ಪಾರ್ಕ್ ಯೋಜನೆಯನ್ನು ಸ್ಥಳಾಂತರಿಸಲು ಪತಂಜಲಿ ನಿರ್ಧರಿಸಿದೆ.
ಉತ್ತರ ಪ್ರದೇಶದಿಂದ  ಪತಂಜಲಿ ಫುಡ್ ಪಾರ್ಕ್ ಯೋಜನೆ ಸ್ಥಳಾಂತರ: ಯೋಗಿ ಸರ್ಕಾರದ  ಉದಾಸೀನತೆ ಬಗ್ಗೆ ಬಾಬಾ ಅಸಮಾಧಾನ!
ಉತ್ತರ ಪ್ರದೇಶದಿಂದ ಪತಂಜಲಿ ಫುಡ್ ಪಾರ್ಕ್ ಯೋಜನೆ ಸ್ಥಳಾಂತರ: ಯೋಗಿ ಸರ್ಕಾರದ ಉದಾಸೀನತೆ ಬಗ್ಗೆ ಬಾಬಾ ಅಸಮಾಧಾನ!
ನವದೆಹಲಿ: 2019 ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಬೆಂಬಲ ನೀಡುವಂತೆ ಕೋರಲು ಜೂ.04 ರಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪತಂಜಲಿ ಸಂಸ್ಥೆಯ ಸಂಸ್ಥಾಪಕ ಬಾಬಾ ರಾಮ್ ದೇವ್ ಅವರೊಂದಿಗೆ  ಚರ್ಚೆ ನಡೆಸಿದ್ದರು. ಈ ಬೆನ್ನಲ್ಲೆ ಉತ್ತರ ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದ್ದ ಪತಂಜಲಿ ಫುಡ್ ಪಾರ್ಕ್ ಯೋಜನೆಯನ್ನು ಸ್ಥಳಾಂತರಿಸಲು ಪತಂಜಲಿ ನಿರ್ಧರಿಸಿದೆ. 
ಗ್ರೇಟರ್ ನೊಯ್ದಾ ಪ್ರದೇಶದಲ್ಲಿ ಸುಮಾರು 450 ಎಕರೆ ಪ್ರದೇಶದಲ್ಲಿ 2000 ಕೋಟಿ ರೂ ವೆಚ್ಚದಲ್ಲಿ ಫುಡ್ ಪಾರ್ಕ್ ನ್ನು ನಿರ್ಮಿಸಲು ಪತಂಜಲಿ ಸಂಸ್ಥೆ ನಿರ್ಧಾರಿಸಿತ್ತು. ಇದಕ್ಕಾಗಿ ನವೆಂಬರ್ 2016 ರಲ್ಲಿ ಅಖಿಲೇಶ್ ಯಾದವ್ ಸರ್ಕಾರ ಪತಂಜಲಿ ಸಂಸ್ಥೆಗೆ ಉಅಮುನಾ ಎಕ್ಸ್ ಪ್ರೆಸ್ ವೇ ಬಳಿ 450 ಎಕರೆ ಭೂಮಿಯನ್ನೂ ಮಂಜೂರು ಮಾಡಿತ್ತು. ಈ ನಡುವೆ ಯೋಜನೆ ಜಾರಿಯಾಗುವುದಕ್ಕೂ ಮುನ್ನ ಯೋಗಿ ಆದಿತ್ಯನಾಥ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಉತ್ತರ ಪ್ರದೇಶ ಸರ್ಕಾರ ಯೋಜನೆ ಬಗ್ಗೆ ಉದಾಸೀನತೆ ತೋರುತ್ತಿದೆ ಎಂದು ಪಿಎಎಲ್ ಎಂಡಿ ಆಚಾರ್ಯ ಬಾಲಕೃಷ್ಣ ಆರೋಪಿಸಿ, ಪತಂಜಲಿ ಸಂಸ್ಥೆ ಪ್ರಸ್ತಾವಿತ ಯೋಜನೆಯನ್ನು ಉತ್ತರ ಪ್ರದೇಶದಿಂದ ಸ್ಥಳಾಂತರಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ. 
ಯೋಗಿ ಆದಿತ್ಯನಾಥ್ ಸರ್ಕಾರ ಹೂಡಿಕೆ ಆಕರ್ಷಣೆಯಲ್ಲಿ ಹಿಂದೆಬಿದ್ದಿದೆ ಎಂಬ ಆರೋಪ ಕೇಳಿಬಂದಿರುವ ಸಂದರ್ಭದಲ್ಲೇ ಪತಂಜಲಿ ಸಂಸ್ಥೆ ಸಹ 2000 ಕೋಟಿ ರೂ ಮೌಲ್ಯದ ಯೋಜನೆಯನ್ನು ಉತ್ತರ ಪ್ರದೇಶದಿಂದ ಸ್ಥಳಾಂತರಿಸಲು ಮುಂದಾಗಿರುವುದು ಯೋಗಿ ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ. 
ಆದರೆ ಪತಂಜಲಿ ಸಂಸ್ಥೆಯ ಆರೋಪವನ್ನು ನಿರಾಕರಿಸಿರುವ ಸರ್ಕಾರದ ವಕ್ತಾರರು " 450 ಭೂಮಿಯನ್ನು ಇಬ್ಭಾಗ ಮಾಡಿ 400 ಎಕರೆಯನ್ನು ಗ್ರೇಟರ್ ನೋಯ್ಡಾ ಬಳಿ ನೀಡಿ ಉಳಿದ 50 ಎಕರೆಯನ್ನು ಬೇರೆಡೆ ನೀಡಲು ಸಂಸ್ಥೆ ಒತ್ತಾಯಿಸುತ್ತಿತ್ತು, ಆದರೆ ಸರ್ಕಾರ ಇದಕ್ಕೆ ಒಪ್ಪಲಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com