ಒಡಿಶಾ: ಮಾತನಾಡುತ್ತಿದ್ದಾಗ ಮೊಬೈಲ್ ಫೋನ್ ಸ್ಫೋಟಗೊಂಡು ಯುವತಿ ಸಾವು

ಮೊಬೈಲ್ ನಲ್ಲಿ ಮಾತನಾಡುತ್ತಿರುವಾಗಲೇ ಫೋನ್ ಸ್ಪೋಟಗೊಂಡ ಕಾರಣ 18 ವರ್ಷದ ಯುವತಿಯೊಬ್ಬಳು ಮೃತಪಟ್ಟ ಘಟನೆ ಒಡಿಶಾದಲ್ಲಿ ನಡೆದಿದೆ.
ಒಡಿಶಾ: ಮಾತನಾಡುತ್ತಿದ್ದಾಗ  ಮೊಬೈಲ್ ಫೋನ್ ಸ್ಫೋಟಗೊಂಡು ಯುವತಿ ಸಾವು
ಒಡಿಶಾ: ಮಾತನಾಡುತ್ತಿದ್ದಾಗ ಮೊಬೈಲ್ ಫೋನ್ ಸ್ಫೋಟಗೊಂಡು ಯುವತಿ ಸಾವು
ಜರ್ಸುಗುಡಾ(ಒಡಿಶಾ):  ಮೊಬೈಲ್ ನಲ್ಲಿ ಮಾತನಾಡುತ್ತಿರುವಾಗಲೇ ಫೋನ್ ಸ್ಪೋಟಗೊಂಡ ಕಾರಣ 18 ವರ್ಷದ ಯುವತಿಯೊಬ್ಬಳು ಮೃತಪಟ್ಟ ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ಜರ್ಸುಗುಡಾ ಜಿಲ್ಲೆ ಲೈಕೇರಾ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಖೇರಿಕಾನಿ ಗ್ರಾಮದ ಯುವತಿ ಮೊಬೈಲ್ ಸ್ಪೋಟದಿಂದ ಸಾವನ್ನಪ್ಪಿದ್ದಾಳೆ. 
ಮೃತ ಯುವತಿಯನ್ನು ಉಮಾ ಓರಮ್ ಎಂದು ಗುರುತಿಸಲಾಗಿದ್ದು  ಆಕೆ ಚಾರ್ಜಿಂಗ್ ಗೆ ಇರಿಸಿದ್ದ ವೇಳೆ ಸಂಬಂಧಿಕರೊಡನೆ ಫೋನ್ ಸಂಬಾಷಣೆ ನಡೆಸಿದ್ದಳೆಂದು ಮೂಲಗಳು ಹೇಳಿದೆ. 
ಇದ್ದಕ್ಕಿದ್ದಂತೆ ಮೊಬೈಲ್ ಬ್ಯಾಟರಿ ದೊಡ್ಡ ಸದ್ದಿನೊಂದಿಗೆ ಸ್ಪೋಟವಾಗಿದ್ದು ಈ ಸ್ಪೋಟದ ಹೊಡೆತಕ್ಕೆ ಉಮಾ ಎದೆ, ಕೈ, ಕಾಲುಗಳಿಗೆ ತೀವ್ರ ಗಾಯವಾಗಿದೆ. ಆಕ ಪ್ರಜ್ಞಾಹೀನ  ಸ್ಥಿತಯಲ್ಲಿದ್ದಾಗಲೇ ಜಿಲ್ಲಾಸ್ಪತ್ರೆಗೆ ದಾಖಲಾಗುದೆ. ಆದರೆ ಅದಾಗಲೇ ಯುವತಿ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ.
ಊಟದ ನಂತರ ಅವರ ಸಂಬಂಧಿಒಯೊಡನೆ ಉಮಾ ಮಾತನಾಡಲು ಬಯಸಿ ಫೋನ್ ತೆಗೆದುಕೊಂಡಿದ್ದಾಳೆ. ಆಗ ಮೊಬೈಲ್ ನಲ್ಲಿ ಚಾರ್ಜ್ ಇಲ್ಲದಿರುವುದು ಕಂಡ ಉಮಾ ಅದನ್ನು ಚಾರ್ಜಿಂಗ್ ಮಾಡಲಿಕ್ಕಾಗಿ ಪ್ಲಗ್ ಇನ್ ಮಾಡಿದ್ದಾಳೆ. ಅದೇ ವೇಳೆ ಸಂಬಂಧಿಕರಿಗೆ ಕರೆ ಮಾಡಿ ಮಾತನಾಡಿದ್ದಾಳೆ ಎಂದು ಆಕೆಯ ಸೋದರ ದುರ್ಗಾ ಪ್ರಸಾದ್ ಹೇಳಿದ್ದಾರೆ.
ಉಮಾ ನೋಕಿಯಾ 3110  ಮೊಬೈಲ್ ಬಳಸುತ್ತಿದ್ದರೆಂದು ಅವರ ಸೋದರ ಮಾಹಿತಿ ನೀಡಿದರು. ಉಮಾ ಸಾವಿನ ಸುದ್ದಿ ತಿಳಿದ ಗ್ರಾಮಸ್ಥರು ಅವರ ಮನೆಯತ್ತ ಧಾವಿಸಿದ್ದು ಸದ್ಯ ಯುವತಿಯ ಸಾವಿಗೆ ಕಾರಣವಾದ  ನೋಕಿಯಾ ಮೊಬೈಲ್ ಸಂಸ್ಥೆ ದೊಡ್ಡ ಮೊತ್ತದ ಪರಿಹಾರ ನಿಡಬೇಕೆಂದು ಆಗ್ರಹಿಸಿದ್ದಾರೆ.
ನೋಕಿಯಾ ಸಂಸ್ಥೆ 3110 ಮಾದರಿ ಫೋನ್ ಅನ್ನು ಕಳೆದ ವರ್ಷ ಮಾರುಕಟ್ಟೆಗೆ ಪರಿಚಯಿಸಿತ್ತು. 
ಏತನ್ಮಧ್ಯೆ ಮೃತ ಯುವತಿಯ ಕುಟುಂಬದ ಹೇಳಿಕೆ ಪಡೆದುಕೊಂಡಿರುವ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com