ಲೋಕಸಭೆ ಜತೆಗೆ ವಿಧಾನಸಭೆ ಚುನಾವಣೆ ಎದುರಿಸಲು ನಾವು ಸಿದ್ದ: ಅಖಿಲೇಶ್ ಯಾದವ್

ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಲೋಕಸಭಾ ಉಪಚುನಾವಣೆಯಲ್ಲಿ ವಿರೋಧಪಕ್ಷಗಳು ಜಯಗಳಿಸಿದ ಹಿನ್ನೆಲೆಯಲ್ಲಿ ಮುಂದಿನ ವರ್ಷ ನಡೆಯುವ ಲೋಕಸಬಾ ಚುನಾವಣೆಯ ಜತೆಗೆ......
ಅಖಿಲೇಶ್ ಯಾದವ್
ಅಖಿಲೇಶ್ ಯಾದವ್
ಲಖನೌ(ಉತ್ತರ ಪ್ರದೇಶ): ಇತ್ತೀಚೆಗೆ ನಡೆದ ಉತ್ತರ ಪ್ರದೇಶ ಲೋಕಸಭಾ ಉಪಚುನಾವಣೆಯಲ್ಲಿ ವಿರೋಧಪಕ್ಷಗಳು ಜಯಗಳಿಸಿದ ಹಿನ್ನೆಲೆಯಲ್ಲಿ ಮುಂದಿನ ವರ್ಷ ನಡೆಯುವ ಲೋಕಸಬಾ ಚುನಾವಣೆಯ ಜತೆಗೆ ವಿಧಾನಸಭೆಗಾಗಿ ಚುನಾವಣೆ ನಡೆದರೂ  ಸ್ಪರ್ಧೆ ನೀಡಲು ನಾವು ಸಿದ್ದರಿದ್ದೇವೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್  ಹೇಳಿದ್ದಾರೆ.
"ಮತದಾರರ ಗುರುತು ಚೀಟಿ ಆಧಾರ್ ಸಂಖ್ಯೆಯೊಡನೆ ಲಿಂಕ್ ಆದರೆ ನಮಗೆ ಸಮಸ್ಯೆ ಇಲ್ಲ, ಒಂದು ದೇಶ, ಒಂದು ಚುನಾವಣೆ ನೀತಿ ಜಾರಿಗೆ ಬಂದರೂ ಸಹ ನಾವು ಹೆದರುವುದಿಲ್ಲ. 2019ರಿಂದಲೇ ಒಂದು ದೇಶ ಒಂದು ಚುನಾವಣೆ ನೀತಿ ಜಾರಿಗೆ ಬರಬೇಕು. ಲೋಕಸಭಾ ಚುನಾವಣೆ ಸಮಯಕ್ಕೆ ಉತ್ತರ ಪ್ರದೇಶದ ವಿಧಾನಸಭೆಗೆ ಚುನಾವಣೆ ನಡೆಸಬೇಕೆಂದು ನಾನು ಬಿಜೆಪಿಯನ್ನು ಒತ್ತಾಯಿಸುತ್ತೇನೆ" ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಖಿಲೇಶ್ ಯಾದವ್ ಹೇಳಿದ್ದಾರೆ.
ಗೋರಖ್ ಪುರ, ಪುಲ್ ಬರ್ಗ್, ಕರೇನಾ ಸೇರಿ ಉತ್ತರ ಪ್ರದೇಶದ ಲೋಕಸಭಾ ಉಪಚುನಾವಣೆಯಲ್ಲಿ ಕೇಸರಿ ಪಕ್ಷ ಸೋಲು ಕಂಡ ಹಿನ್ನೆಲೆಯಲ್ಲಿ ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಬಿಜೆಪಿಯನ್ನು ಟೀಕಿಸಿದ್ದಾರೆ.
ಉತ್ತರ ಪ್ರದೇಶದ ಸಮಿತಿಯೊಂದು ಮುಂದಿನ ಲೋಕಸಭೆ ಚುನಾವಣೆ ವೇಳೆ ಉತ್ತರ ಪ್ರದೇಶ ವಿಧಾನ ಸಭೆಗೆ ಚುನಾವಣೆ ಹಮ್ಮಿಕೊಳ್ಳುವಂತೆ ಸೂಚಿಸಿದ್ದು ಭಾರತದ ಕಾನೂನು ಆಯೋಗ ಹಾಗು ಪ್ರಧಾನಿ ಮೋದಿ ಸಹ ಒಂದು ದೇಶ, ಒಂದು ಚುನಾವಣೆ ನೀತಿಯ ಕುರಿತು ಒಲವು ಹೊಂದಿದ್ದಾರೆ.
"ಈ ಸಂಬಂಧ ನಮ್ಮಿಂದ ಯಾವ ಸಲಹೆಯನ್ನೂ ಸ್ವೀಕರಿಸಿಲ್ಲ" ಎಂದು ಅಖಿಲೇಶ್ ದೂರಿದ್ದಾರೆ. 
ಉತ್ತರ ಪ್ರದೇಶ ಆರೋಗ್ಯ ಸಚಿವ ಸಿಂದರ್ಥ್ ನಾಥ್ ಸಿಂಗ್ ನೇತೃತ್ವದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಚಿಸಿದ್ದ ಏಳು ಸಚಿವರ ಸಮಿತಿಯು ಮಂಗಳವಾರ ಈ ಕುರಿತ ವರದಿಯನ್ನು ಸಲ್ಲಿಸಿತ್ತು.
"ದೇಶದಲ್ಲಿ ಇದೇ ಮೊದಲ ಬಾರಿಗೆ ಪ್ರಧಾನಿ ಯೋಚನೆಯನ್ನು ಕಾರ್ಯರೂಪಕ್ಕಿಳಿಸಲು ಉತ್ತರ ಪ್ರದೇಶ ರಾಜ್ಯ್ ಆಸಕ್ತಿ ತಾಲಿದೆ. ಲೋಕಸಭೆ ಚುನಾವಣೆ ಜತೆಗೆ ವಿಧಾನಸಭೆ, ಪಂಚಾಯತ್ ಚುನಾವಣೆ ಸೇರಿ ಎಲ್ಲಾ ಸ್ಥಾನಗಳಿಗೆ ಚುನಾವಣೆ ನಡೆಸುವುದು ನಮ್ಮ ಉದ್ದೇಶ. ಇದು ಸಾಧ್ಯವಿದೆ" ಎಂದು ಸಮಿತಿಯ ಮುಖ್ಯಸ್ಥರಾದ ಸಿಂಗ್ ಹೇಳಿದ್ದಾರೆ.
"ನಾವು ವರದಿಯನ್ನು ಕೇಂದ್ರಕ್ಕೆ ಹಸ್ತಾಂತರಿಸುತ್ತೇವೆ. ದೀರ್ಘಕಾಲಿಕ ಸಾರ್ವಜನಿಕ ಹಿತಾಸಕ್ತಿಯನ್ನು ನೋಡೊಇದಾಗ ಇದು ಒಳ್ಳೆಯ ಯೋಜನೆ.ಚುನಾವಣಾ ಅಕ್ರಮ ತಡೆಯುವುದಕ್ಕೆ, ದುಂದುವೆಚ್ಚ ತಗ್ಗಿಸುವುದಕ್ಕೆ ಸೇರಿ ಎಲ್ಲಾ ರಿತಿಯಲ್ಲಿ ಒಂದು ದೇಶ, ಒಂದು ಚುನಾವಣೆ ಯೋಜನೆ ಉತ್ತಮವಾಗಿದೆ" ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com