ಮಧ್ಯಪ್ರದೇಶದಲ್ಲಿ ಬಿಜೆಪಿಯನ್ನು ಸೋಲಿಸಲು ಮೈತ್ರಿಗೆ ಎಸ್ ಪಿ ಮುಕ್ತವಾಗಿದೆ: ಅಖಿಲೇಶ್ ಯಾದವ್
ವರ್ಷಾಂತ್ಯಕ್ಕೆ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿದ್ದು, ಬಿಜೆಪಿಯನ್ನು ಸೋಲಿಸಲು ಮೈತ್ರಿಕೂಟ ರಚನೆಯಾದರೆ ಎಸ್ ಪಿ ಬೆಂಬಲಿಸಲಿದೆ ಎಂದು
ಲಖನೌ: ವರ್ಷಾಂತ್ಯಕ್ಕೆ ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸುತ್ತಿದ್ದು, ಬಿಜೆಪಿಯನ್ನು ಸೋಲಿಸಲು ಮೈತ್ರಿಕೂಟ ರಚನೆಯಾದರೆ ಎಸ್ ಪಿ ಬೆಂಬಲಿಸಲಿದೆ ಎಂದು ಅಖಿಲೇಶ್ ಯಾದವ್ ಹೇಳಿದ್ದಾರೆ.
ಎಸ್ ಪಿ ಮುಖ್ಯಸ್ಥರಾಗಿರುವ ಅಖಿಲೇಶ್ ಯಾದವ್, ಮಧ್ಯಪ್ರದೇಶದ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಮೈತ್ರಿಕೂಟ ರಚನೆಯಾದರೆ 2019 ರ ಲೋಕಸಭಾ ಚುನಾವಣೆಗೆ ಸಹಕಾರಿಯಾಗಲಿದೆ ಎಂದು ಒಂದು ವೇಳೆ ಮೈತ್ರಿ ರಚನೆಯಾಗದೇ ಇದ್ದರೆ ತಮ್ಮ ಪಕ್ಷ ಏಕಾಂಗಿಯಾಗಿ ಸ್ಪರ್ಧಿಸುತ್ತದೆ ಎಂದು ತಿಳಿಸಿದ್ದಾರೆ.
ಆದರೆ ಸಮಾಜವಾದಿ ಪಕ್ಷಗಳ ಮೂಲಗಳ ಪ್ರಕಾರ ಸೂಕ್ತ ಮೈತ್ರಿ ಏರ್ಪಾಡಾಗದೇ ಇದ್ದಲ್ಲಿ ಮಧ್ಯಪ್ರದೇಶದಲ್ಲಿ ಸಮಾಜವಾದಿ ಪಕ್ಷ ಎಲ್ಲಾ 230 ಸ್ಥಾನಗಳಲ್ಲಿಯೂ ಸ್ಪರ್ಧಿಸಲಿದೆ. ಅಂತೆಯೇ ಚತ್ತೀಸ್ ಗಢದ ಎಲ್ಲಾ 90 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಎಂದು ತಿಳಿದುಬಂದಿದೆ. ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದು ವಿಪಕ್ಷಗಳಿಗೆ ಗೆಲುವು ಸುಲಭವಾಗಿರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ನಡೆದ ಮೈತ್ರಿಯ ಮಾದರಿಯೇ ಮಧ್ಯಪ್ರದೇಶದಲ್ಲೂ ಮುಂದುವರಿದರೆ ಎಸ್ ಪಿ ಸಹ ವಿಪಕ್ಷಗಳೊಂದಿಗೆ ಕೈ ಜೋಡಿಸುವುದು ನಿಶ್ಚಿತವಾಗಿರಲಿದೆ.