ಉಗ್ರರ ಬೆದರಿಕೆ ಹಿನ್ನೆಲೆ, ಉತ್ತರ ಪ್ರದೇಶದಲ್ಲಿ ಹೈ ಆಲರ್ಟ್ : ಬಿಗಿ ಭದ್ರತೆ

ಪಾಕಿಸ್ತಾನ ಮೂಲದ ಲಷ್ಕರ್ ಇ- ತೊಯ್ಬಾ ಸಂಘಟನೆಯಿಂದ ಬೆದರಿಕೆ ಪತ್ರದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ರಾಜ್ಯಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಥುರಾ: ಪಾಕಿಸ್ತಾನ ಮೂಲದ ಲಷ್ಕರ್ ಇ- ತೊಯ್ಬಾ ಸಂಘಟನೆಯಿಂದ ಬೆದರಿಕೆ  ಪತ್ರದ ಹಿನ್ನೆಲೆಯಲ್ಲಿ  ಉತ್ತರ ಪ್ರದೇಶ ರಾಜ್ಯಾದ್ಯಂತ  ಬಿಗಿ ಭದ್ರತೆ ಏರ್ಪಡಿಸಲಾಗಿದೆ.

 ಕಾಶಿ ವಿಶ್ವನಾಥ ಮತ್ತು ಕೃಷ್ಣ ಜನ್ಮಭೂಮಿಯ ದೇವಾಲಯಗಳು ಹಾಗೂ ಕೆಲ ರೈಲ್ವೆ ನಿಲ್ದಾಣಗಳನ್ನು  ಸ್ಟೋಟಿಸುವುದಾಗಿ  ಮೇ 29 ರಂದು  ಎಲ್ ಇಟಿ ಕಮಾಂಡರ್ ಮೌಲಾನಾ ಅಬು ಶೈಕ್ ಕಳುಹಿಸಿದ ಬೆದರಿಕೆ ಪತ್ರವನ್ನು ಉತ್ತರ ರೈಲ್ವೆ  ಅಧಿಕಾರಿಗಳು ಪಡೆದಿದ್ದಾರೆ ಎಂಬುದು ಮೂಲಗಳಿಂದ ತಿಳಿದುಬದಿದೆ.

ದೇವಾಲಯಗಳ ನಗರ ಮಥುರಾದಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಶ್ರೀ ಕೃಷ್ಣ ಜನ್ಮಭೂಮಿ,  ಬಂಕಿ ಬಿಹರಿ ದೇವಾಲಯ, ಮಥುರಾ ಜಂಕ್ಷನ್ ಮತ್ತು  ಸಂಸ್ಕರಣಾಗಾರ ಮತ್ತಿತರ ಪ್ರಮುಖ ಪ್ರದೇಶಗಳಲ್ಲಿ  ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ.

ಈ ಪ್ರದೇಶದಲ್ಲಿ ಯಾವಾಗಲೂ ಹೆಚ್ಚಿನ ಪ್ರಮಾಣದಲ್ಲಿ ಭದ್ರತೆ ಕೈಗೊಳ್ಳಲಾಗಿರುತ್ತದೆ. ಆದರೆ. ಈ ರೀತಿಯ ಯಾವುದೇ ಸಣ್ಣ ಸುಳಿವು ಸಿಕ್ಕರೂ ಭದ್ರತೆ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗುತ್ತದೆ ಎಂದು  ಪೊಲೀಸ್ ವರಿಷ್ಠಾಧಿಕಾರಿ  ಸಿದ್ದಾರ್ಥ ವರ್ಮಾ  ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ಬೆದರಿಕೆಗಳಿಂದ ನಗರದ ಯಾತ್ರಿಕರು ಆತಂಕಗೊಂಡಿದ್ದಾರೆ.ಆದಾಗ್ಯೂ,   ದೇವರೂ ಎಲ್ಲವನ್ನೂ ನೋಡಿಕೊಳ್ಳುತ್ತಾನೆ. ಯಾವುದೇ ಹಾನಿಯಾಗದಂತೆ ಮಾಡುತ್ತಾನೆ. "ಯಾವುದೇ ಹಾನಿ ಇಲ್ಲ, ನಂಬಿಕೆ ಮೇಲೆ ಭಯೋತ್ಪಾದನೆಯಿಂದ ಯಾವುದೇ ಪರಿಣಾಮ  ಆಗಲ್ಲ ಎಂದು  ಯಾತ್ರಿಕರೊಬ್ಬರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com