ಭಾರತೀಯ ಭದ್ರತಾ ಪಡೆಗಳು ಪ್ರಧಾನಿ ಮೋದಿ ಹತ್ಯೆ ಸಂಚನ್ನು ವಿಫಲಗೊಳಿಸಲಿವೆ: ಕೇಂದ್ರ ಸರ್ಕಾರ

ಭಾರತೀಯ ಭದ್ರತಾ ಪಡೆಗಳು ಬಲಿಷ್ಟವಾಗಿದ್ದು, ಪ್ರಧಾನಿ ಮೋದಿ ಹತ್ಯೆ ಸಂಚನ್ನು ವಿಫಲಗೊಳಿಸಲಿವೆ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಭಾರತೀಯ ಭದ್ರತಾ ಪಡೆಗಳು ಬಲಿಷ್ಟವಾಗಿದ್ದು, ಪ್ರಧಾನಿ ಮೋದಿ ಹತ್ಯೆ ಸಂಚನ್ನು ವಿಫಲಗೊಳಿಸಲಿವೆ ಎಂದು ಕೇಂದ್ರ ಸರ್ಕಾರ ಶನಿವಾರ ಹೇಳಿದೆ.
ಶನಿವಾರ ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಹಂಸರಾಜ್ ಅಹಿರ್ ಅವರು, ದೇಶದ ಭದ್ರತಾ ಪಡೆಗಳು ಬಲಿಷ್ಠವಾಗಿದ್ದು, ಹತ್ಯೆಯಂತಹ ಸಂಚನ್ನು ವಿಫಲಗೊಳಿಸಲಿವೆ. ಹತ್ಯೆಯಂತಹ ಕೃತ್ಯಗಳಿಗೆ ಭದ್ರತಾ ಪಡೆಗಳು ಯಾವುದೇ ಕಾರಣಕ್ಕೂ ಅನುವು ಮಾಡಿಕೊಡುವುದಿಲ್ಲ. ಹತ್ಯೆ ಸಂಚನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಈಗಾಗಗಲೇ ಈ ಸಂಬಂಧ ಕೆಲ ಶಂಕಿತರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಇಂತಹ ಕೃತ್ಯಕ್ಕೆ ಕೈ ಹಾಕುವ ದುಷ್ಕರ್ಮಿಗಳನ್ನು ಬಿಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ.
ನಿನ್ನೆಯಷ್ಟೇ ಪುಣೆ ಪೊಲೀಸರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಮಾದರಿಯಲ್ಲಿ ಮಾವೋವಾದಿಗಳು ಪ್ರಧಾನಿ ನರೇಂದ್ರ ಮೋದಿ ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂದು ನ್ಯಾಯಾಲಯಕ್ಕೆ ಹೇಳಿಕೆ ನೀಡಿದ್ದರು. ಈ ಸಂಬಂಧ ದುಷ್ಕರ್ಮಿಗಳಿಂದ ವಶಪಡಿಸಿಕೊಂಡ ಪತ್ರವನ್ನೂ ಕೂಡ ಪೊಲೀಸರು ನ್ಯಾಯಾಲಯಕ್ಕೆ ನೀಡಿದ್ದರು. ಭೀಮಾ ಕೋರೆಗಾಂವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಪ್ರಧಾನಿ ಹತ್ಯೆ ಕುರಿತ ಸುಳಿವು ದೊರೆತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com