ನೀರವ್‌ ಮೋದಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ನೀಡುವಂತೆ ಇಂಟರ್ ಪೋಲ್ ಗೆ ಸಿಬಿಐ ಮನವಿ

ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 12,700 ಕೋಟಿ ರು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ...
ನೀರವ್ ಮೋದಿ (ಸಂಗ್ರಹ ಚಿತ್ರ)
ನೀರವ್ ಮೋದಿ (ಸಂಗ್ರಹ ಚಿತ್ರ)
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 12,700 ಕೋಟಿ ರು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿ ವಿರುದ್ಧ ರೆಡ್‌ ಕಾರ್ನರ್‌ ನೋಟಿಸ್‌ ನೀಡಬೇಕು ಎಂದು ಸಿಬಿಐ ಸೋಮವಾರ ಇಂಟರ್ ಪೋಲ್‌ಗೆ ಮನವಿ ಮಾಡಿದೆ.
ಈ ಸಂಬಂಧ ಇಂದು ಇಂಟರ್ ಪೋಲ್‌ಗೆ ಪತ್ರ ಬರೆದಿರುವ ಸಿಬಿಐ, ರೆಡ್‌ ಕಾರ್ನರ್‌ ನೋಟಿಸ್ ನೀಡಿದರೆ ಅಂತರರಾಷ್ಟ್ರೀಯ ಪೊಲೀಸ್‌ ಸಂಸ್ಥೆಯ ಮೂಲಕ ನೀರವ್‌ ಮೋದಿಯನ್ನು ಬಂಧಿಸಬಹುದು. ಇಲ್ಲದಿದ್ದರೆ, ನೀರವ್ ಮೋದಿ ಪಲಾಯನ ಮಾಡಬಹುದು ಎಂದು ಉಲ್ಲೇಖೀಸಿದೆ.
12,700 ಕೋಟಿ ರುಪಾಯಿ ವಂಚನೆಗೆ ಸಂಬಂಧಿಸಿದಂತ ನೀರವ್ ಮೋದಿ ಹಾಗೂ ಅವರ ಅಂಕಲ್,  ಗೀತಾಂಜಲಿ ಜೆಮ್ಸ್ ನ ಮೆಹುಲ್ ಚೋಕ್ಸಿ ವಿರುದ್ಧ ಸಿಬಿಐ ಎಫ್ ಐಆರ್ ದಾಖಲಿಸಿದ್ದು, ವಿಚಾರಣೆಗೆ ಹಾಜರಾಗುವಂತೆ ನಾಲ್ಕು ಬಾರಿ ಸಮನ್ಸ್ ನೀಡಿದರೂ ಆರೋಪಿಗಳಿಂದ ಯಾವುದೇ ಪ್ರತಿಕ್ರಿಯೆ ಬರದ ಹಿನ್ನೆಲೆಯಲ್ಲಿ ಈಗ ರೆಡ್ ಕಾರ್ನರ್ ನೋಟಿಸ್ ಮೊರೆ ಹೋಗಿದೆ.
ನೀರವ್ ಮೋದಿ ಸ್ವಿಟ್ಜರ್ ಲೆಂಡ್ ನ ದಾವೋಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಭಾರತೀಯ ಉದ್ಯಮಿಗಳ, ಸಿಇಒಗಳೊಂದಿಗಿರುವ ಫೋಟೋ ಮೂಲಕ ಕೊನೆ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com