ಭಾರತ-ಪಾಕ್ ಸಂಬಂಧ ಸುಧಾರಿಸಲು ಶಾಂಘೈ ಸಹಕಾರ ಸಂಘ ’ಉತ್ತಮ ವೇದಿಕೆ’: ಚೀನಾ

ಭಾರತ-ಪಾಕಿಸ್ತಾನದ ಸಂಬಂಧ ಸುಧಾರಿಸಲು ಶಾಂಘೈ ಸಹಕಾರ ಸಂಘ ಅತ್ಯುತ್ತಮ ವೇದಿಕೆಯಾಗಬಲ್ಲದು ಎಂದು ಚೀನಾ ಅಭಿಪ್ರಾಯಪಟ್ಟಿದೆ.
ಭಾರತ-ಪಾಕ್ ಸಂಬಂಧ ಸುಧಾರಿಸಲು ಶಾಂಘೈ ಸಹಕಾರ ಸಂಘ ’ಉತ್ತಮ ವೇದಿಕೆ’: ಚೀನಾ
ಭಾರತ-ಪಾಕ್ ಸಂಬಂಧ ಸುಧಾರಿಸಲು ಶಾಂಘೈ ಸಹಕಾರ ಸಂಘ ’ಉತ್ತಮ ವೇದಿಕೆ’: ಚೀನಾ
ಬೀಜಿಂಗ್: ಭಾರತ-ಪಾಕಿಸ್ತಾನದ ಸಂಬಂಧ ಸುಧಾರಿಸಲು ಶಾಂಘೈ ಸಹಕಾರ ಸಂಘ ಅತ್ಯುತ್ತಮ ವೇದಿಕೆಯಾಗಬಲ್ಲದು ಎಂದು ಚೀನಾ ಅಭಿಪ್ರಾಯಪಟ್ಟಿದೆ. 
ಎಸ್ ಸಿಒ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಅತ್ಯುತ್ತಮ ವೇದಿಕೆಯಾಗಿದ್ದು ಹಲವು ಅವಕಾಶಗಳಿದ್ದು, ಭಾರತ-ಪಾಕ್ ದ್ವಿಪಕ್ಷೀಯ ಸಂಬಂಧ ವೃದ್ಧಿಗೂ ಸಹಕಾರಿಯಾಗಬಹುದು ಎಂದು ಚೀನಾದ ವಿದೇಶಾಂಗ ಸಚಿವರು ಹೇಳಿದ್ದಾರೆ.  ಶಾಂಘೈ ಸಹಕಾರ ಸಂಘದ ಶೃಂಗಸಭೆ ಮುಕ್ತಾಯಗೊಳ್ಳುತ್ತಿದ್ದಂತೆ ಚೀನಾದಿಂದ ಈ ಹೇಳಿಕೆ ಬಂದಿದೆ. 
ಭಾರತ-ಪಾಕಿಸ್ತಾನದ ನಡುವೆ ಇನ್ನೂ ಬಗೆಹರಿಯದ ಐತಿಹಾಸಿಕ ವಿಷಯಗಳಿವೆ, ಆದರೆ ಎರಡೂ ರಾಷ್ಟ್ರಗಳೂ ಎಸ್ ಸಿಒ ಸೇರಿದ ನಂತರ ಭಾರತ-ಪಾಕಿಸ್ತಾನದ ದ್ವಿಪಕ್ಷೀಯ ಸಂಬಂಧ ಉತ್ತಮಗೊಳ್ಳಲಿದೆ ಎಂಬ ವಿಶ್ವಾಸವಿದೆ ಎಂದು ಚೀನಾ ಹೇಳಿದೆ. ಎಸ್ ಸಿಒ ಸೇರಿದ ಬಳಿಕ ಸರಣಿ ಒಪ್ಪಂದಗಳನ್ನು ಮಾಡಿಕೊಳ್ಳಬೇಕಾಗುತ್ತದೆ, ಇದರಿಂದ ಒಕ್ಕೂಟದ ರಾಷ್ಟ್ರಗಳ ನಡುವೆ ಸೌಹಾರ್ದಯುತ ವಾತಾವರಣ ಉಂಟಾಗಲಿದೆ ಎಂದು ಚೀನಾ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com