ಜೆಎನ್ ಯು ವಿದ್ಯಾರ್ಥಿ ಉಮರ್ ಖಲೀದ್ ಬಗ್ಗೆ ಆಲೋಚಿಸಿ: ನಿತಿನ್ ಗಡ್ಕರಿಗೆ ಶೆಹ್ಲಾ ರಷೀದ್ ತಿರುಗೇಟು

ತಳಬುಡವಿಲ್ಲದ ಮಾಧ್ಯಮ ವರದಿಯಿಂದ ಮುಗ್ಧ ಜೆಎನ್​ಯು ವಿದ್ಯಾರ್ಥಿ ಉಮರ್​ ಖಾಲಿದ್​ ಹಾಗೂ ಆತನ ತಂದೆಯ ಮೇಲೆ ಹಲ್ಲೆಯಾದಾಗ ಯಾರು ಎಚ್ಚರವಹಿಸಲಿಲ್ಲ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ತಳಬುಡವಿಲ್ಲದ ಮಾಧ್ಯಮ ವರದಿಯಿಂದ ಮುಗ್ಧ ಜೆಎನ್​ಯು ವಿದ್ಯಾರ್ಥಿ ಉಮರ್​ ಖಾಲಿದ್​ ಹಾಗೂ ಆತನ ತಂದೆಯ ಮೇಲೆ ಹಲ್ಲೆಯಾದಾಗ ಯಾರು ಎಚ್ಚರವಹಿಸಲಿಲ್ಲ. ಈ ಬಗ್ಗೆ ಉತ್ತರಿಸಿ ಎಂದು ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಹಕ್ಕುಗಳ ಕಾರ್ಯಕರ್ತೆ ಶೆಹ್ಲಾ ರಶೀದ್ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಕಿಡಿಕಾರಿದ್ದಾರೆ.
ತಮ್ಮ ವಿರುದ್ಧ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಕಾನೂನು ಕ್ರಮದ ಎಚ್ಚರಿಕೆ ನೀಡಿ ಟ್ವೀಟ್ ಮಾಡಿದ ಬೆನ್ನಲ್ಲೇ ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ವಿಶ್ವದ ದೊಡ್ಡ ಪಕ್ಷದ ನಾಯಕರಾಗಿರುವವರು​ ವ್ಯಂಗ್ಯಭರಿತ ಮಾತಿನ ಬಗ್ಗೆ ಕಾರ್ಯಪ್ರವೃತ್ತರಾಗುತ್ತಾರೆ. ಆದರೆ, ತಳಬುಡವಿಲ್ಲದ ಮಾಧ್ಯಮ ವರದಿಯಿಂದ ಮುಗ್ಧ ಜೆಎನ್​ಯು ವಿದ್ಯಾರ್ಥಿ ಉಮರ್​ ಖಾಲಿದ್​ ಹಾಗೂ ಆತನ ತಂದೆಯ ಮೇಲೆ ಹಲ್ಲೆಯಾದಾಗ ಯಾರು ಎಚ್ಚರವಹಿಸಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಇದಕ್ಕೂ ಮೊದಲು ಆರ್ ಎಸ್ಎಸ್ ಮತ್ತು ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದಾರೆ ಎಂದು ಶೆಹ್ಲಾ ರಷೀದ್ ವಿವಾದಾತ್ಮಕ ಟ್ವೀಟ್ ಮಾಡಿದ್ದರು. ಶನಿವಾರ ತಮ್ಮ ಟ್ವಿಟರ್​ನಲ್ಲಿ ಆರ್​ಎಸ್​ಎಸ್​ ಮತ್ತು ನಿತಿನ್ ಗಡ್ಕರಿ ಅವರನ್ನು ನೋಡಿದರೆ ಪ್ರಧಾನಿ ಮೋದಿ ಅವರನ್ನು ಕೊಲ್ಲಲು ಸಂಚು ರೂಪಿಸಿದವರಂತೆ ಕಾಣುತ್ತಾರೆ. ನಂತರ ಅದನ್ನು ಮುಸ್ಲಿಂ ಹಾಗೂ ಕಮ್ಯೂನಿಸ್ಟ್ ​ಗಳ ಮೇಲೆ ಹೊರಿಸಿ, ನಂತರ ಮುಸ್ಲಿಮರನ್ನು ರಾಜೀವ್​ ಗಾಂಧಿ ಹತ್ಯೆ ಮಾದರಿಯಲ್ಲಿ ಗಲ್ಲಿಗೇರಿಸುವ ತಂತ್ರ ಮಾಡಲಾಗುತ್ತಿದೆ ಎಂದು ಶೆಹ್ಲಾ ರಶೀದ್ ಟ್ವೀಟ್​ ಮಾಡಿದ್ದರು.
ಈ ಟ್ವೀಟ್ ವ್ಯಾಪಕ ಸುದ್ದಿಗೆ ಗ್ರಾಸವಾದ ಬೆನ್ನಲ್ಲೇ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಹಕ್ಕುಗಳ ಕಾರ್ಯಕರ್ತೆ ಶೆಹ್ಲಾ ರಶೀದ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ. ಶೆಹ್ಲಾ ರಷೀದ್ ಅವರ ಟ್ವೀಟ್ ಆರೋಪಕ್ಕೆ ಟ್ವಿಟರ್ ನಲ್ಲೇ ಉತ್ತರ ನೀಡಿರುವ ಮೋದಿ ಹತ್ಯೆ ವಿಚಾರದಲ್ಲಿ ಸಮಾಜದ ವಿರುದ್ಧ ವಿಲಕ್ಷಣ ಕಾಮೆಂಟ್​ ಮಾಡಿರುವವರ ವಿರುದ್ಧ ಕಾನೂನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com