ಸರ್ಕಾರಿ ಬಂಗಲೆ ವಿರೂಪ ವಿವಾದ : ಇದು ಬಿಜೆಪಿಯ ಕುತಂತ್ರ- ಅಖಿಲೇಶ್

ತಮ್ಮ ವಿರುದ್ಧದ ಸರ್ಕಾರಿ ಬಂಗಲೆ ಹಾನಿ ವಿವಾದದ ಹಿಂದೆ ಬಿಜೆಪಿಯ ಕುತಂತ್ರವಿದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.
ಯೋಗಿ ಆದಿತ್ಯನಾಥ್ , ಅಖಿಲೇಶ್  ಯಾದವ್
ಯೋಗಿ ಆದಿತ್ಯನಾಥ್ , ಅಖಿಲೇಶ್ ಯಾದವ್

ಲಖನೌ: ತಮ್ಮ ವಿರುದ್ಧದ  ಸರ್ಕಾರಿ ಬಂಗಲೆ ವಿರೂಪ ವಿವಾದದ ಹಿಂದೆ ಬಿಜೆಪಿಯ ಕುತಂತ್ರವಿದೆ ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

ತಮ್ಮಗಿಂತಲೂ ಮುಂಚಿತವಾಗಿ ಏಕೆ ಇಬ್ಬರು ರಾಜ್ಯ ಅಧಿಕಾರಿಗಳು ಈ ಬಂಗಲೆಯೊಳಗೆ ಪ್ರವೇಶಿಸಿದ್ದರು ಎಂಬುದನ್ನು ಬಿಜೆಪಿ ಸ್ಪಷ್ಟಪಡಿಸಬೇಕೆಂದು ಅವರು  ಒತ್ತಾಯಿಸಿದ್ದಾರೆ.

ಈ ವಿವಾದಕ್ಕೆ ಸಂಬಂಧಿಸಿದಂತೆ ಅಲ್ಲಿನ ರಾಜ್ಯಪಾಲರ ವಿರುದ್ಧವೂ ಅಖಿಲೇಶ್ ಯಾದವ್ ವಾಗ್ದಾಳಿ ನಡೆಸಿದ್ದಾರೆ. ಅವರೊಬ್ಬರು  ಆರ್ ಎಸ್ ಎಸ್ ನ ಆತ್ಮವಿದ್ದಂತೆ ಎಂದು ಆರೋಪಿಸಿದ್ದಾರೆ.   

ಮಾಧ್ಯಮಗಳಿಗೆ ಮನೆ  ತೋರುವ ಮುನ್ನ ಮುಖ್ಯಮಂತ್ರಿಗಳ ಆಪ್ತ ಅಧಿಕಾರಿ ಅಭಿಷೇಕ್ ಹಾಗೂ ಐಎಎಸ್ ಅಧಿಕಾರಿ ಮೃತ್ಯುಂಜಯ್ಯ ನಾರಾಹಿಣ್ ಏಕೆ ತಮ್ಮ ಮನೆಯೊಳಗೆ ಪ್ರವೇಶಿಸಿದ್ದರು ಎಂದು ಅವರು ಪ್ರಶ್ನಿಸಿದ್ದು, ವರದಿಗಾಗಿ ಕಾಯುತ್ತಿರುವುದಾಗಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು.

ಗೊರಖ್ ಪುರ, ಫುಲ್ಪುರ್, ಕೈರಾನಾ ಹಾಗೂ ನೂರ್ ಪುರ್ ನಲ್ಲಿ  ಹೀನಾಯ ಸೋಲಿನ ಬಳಿಕ ಬಿಜೆಪಿ ಈ ರೀತಿಯ ಕುತಂತ್ರ ಎಣೆದಿದೆ. ಆ ಬಂಗಲೆಗಾಗಿ 42 ಕೋಟಿ ವೆಚ್ಚ ಮಾಡಲಾಗಿತ್ತು ಎಂದು ಕೆಲವರು ಹೇಳಿದ್ದರೆ,  ಈಜುಕೊಳ ಇತ್ತೆಂದು ಮತ್ತೊಬ್ಬರು ಹೇಳುತ್ತಾರೆ. ಈಜುಕೊಳ ಎಲ್ಲಿದೆ ತೋರಿಸಿ ಎಂದು  ಅಖಿಲೇಶ್  ವಾಗ್ದಾಳಿ ನಡೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com