'ಮಹಾಮೈತ್ರಿ' ದೇಶದ ಜನರ ಭಾವನಾತ್ಮಕ ವಿಚಾರವಾಗಿದೆ: ರಾಹುಲ್ ಗಾಂಧಿ

ಎಲ್ಲ ವಿಪಕ್ಷಗಳೂ ಒಗ್ಗೂಡಿರುವ ಮಹಾ ಮೈತ್ರಿಕೂಟ ಇಡೀ ದೇಶದ ಭಾವನಾತ್ಮಕ ವಿಚಾರವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಎಲ್ಲ ವಿಪಕ್ಷಗಳೂ ಒಗ್ಗೂಡಿರುವ ಮಹಾ ಮೈತ್ರಿಕೂಟ ಇಡೀ ದೇಶದ ಭಾವನಾತ್ಮಕ ವಿಚಾರವಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಸಮಾನ ಮನಸ್ಕ ಮತ್ತು ಕೋಮುವಾದಿ ವಿರೋಧಿ ಧ್ವನಿಗಳ ಒಗ್ಗೂಡಿಸುವ ಕೆಲಸ ನಡೆಯುತ್ತಿದ್ದು, ಪ್ರಧಾನಿ ಮೋದಿ ಮತ್ತು ಬಿಜೆಪಿ ಎದುರಿಸಲು  ಎಲ್ಲ ವಿಪಕ್ಷಗಳೂ ಒಗ್ಗೂಡಿರುವ ಮಹಾ ಮೈತ್ರಿಕೂಟ ಇಡೀ ದೇಶದ ಜನರ ಭಾವನಾತ್ಮಕ ವಿಚಾರವಾಗಿದೆ. ಕೇವಲ ರಾಜಕೀಯಕ್ಕಾಗಿ ನಾವು ಒಂದಾಗಿಲ್ಲ. ಜನರಿಗಾಗಿ ಒಂದಾಗಿದ್ದೇವೆ ಎಂದು ಹೇಳಿದರು.
'ಕೇವಲ ರಾಜಕೀಯ ಅವಕಾಶಕ್ಕಾಗಿ ನಾವು ಒಗ್ಗೂಡಿಲ್ಲ, ಅರ್ ಎಸ್ ಎಸ್, ಬಿಜೆಪಿ, ಪ್ರಧಾವಿ ಮೋದಿ ಎದುರಿಸಲು ಮಹಾಘಟ್ ಬಂಧನ್ ರಚನೆಯಾಗಿದ್ದು, ಇದು ದೇಶದ ಜನರ ಭಾವನಾತ್ಮಕ ವಿಚಾರ ಕೂಡ ಆಗಿದೆ. ಪ್ರಧಾನಿ ಮೋದಿ ಸಂವಿಧಾನ ಮತ್ತು ದೇಶದ ಪ್ರಬಲ ಶಕ್ತಿಯಾಗಿರುವ ಸಾಂವಿಧಾನಿಕ ಸಂಸ್ಥೆಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ದೇಶದಲ್ಲಿ ತೈಲ ಬೆಲೆ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಗಗನಕ್ಕೇರಿದ್ದು, ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ಜಿಎಸ್ ಟಿಗೆ ಸೇರಿಸುವಂತೆ ನಾವು ಆಗ್ರಹಿಸುತ್ತಿದ್ದೇವೆ. ಆದರೂ ಪ್ರಧಾನಿ ಮೋದಿ ಇದರ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ಹೇಳಿದರು.
ಅಂತೆಯೇ ನೋಟು ನಿಷೇಧ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ, ನೋಟು ನಿಷೇಧದ ಮೂಲಕ ಪ್ರಧಾನಿ ಮೋದಿ ವಾಣಿಜ್ಯ ರಾಜಧಾನಿ ಮುಂಬೈ ಮೇಲೆ ದಾಳಿ ಮಾಡಿದರು. ದೇಶದಲ್ಲಿ ಸಾಕಷ್ಟು ಸಣ್ಣ ಉದ್ದಿಮೆಗಳು ಹಾಗೂ ಉದ್ದಿಮೆದಾರರು ನೆಲಕಚ್ಚಿದ್ದಾರೆ. ಗಬ್ಬರ್ ಸಿಂಗ್ ಟ್ಯಾಕ್ಸ್ ನಿಂದಾಗಿ ಸಣ್ಣ ಉದ್ದಿಮೆದಾರರು ಅಳಿವಿನಂಚಿನಲ್ಲಿದ್ದಾರೆ. ದುರಂತವೆಂದರೆ ಒಂದು ಕಾಲದಲ್ಲಿ ದೇಶದ ವಾಣಿಜ್ಯ ಕ್ಷೇತ್ರ ಬೆನ್ನೆಲುಬಾಗಿದ್ದ ಸಣ್ಣಉದ್ದಿಮೆದಾರರನ್ನು ಇಂದು ನಾವು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com