ಭಾರತೀಯ ಸೇನೆ
ದೇಶ
ಕಾಶ್ಮೀರ: ಮೋಸ್ಟ್ ವಾಂಟೆಡ್ ಉಗ್ರ ಸಮೀರ್ ಟೈಗರ್ ಹತ್ಯೆಗೈದಿದ್ದ ಯೋಧನ ಅಪಹರಣ!
ಹಿಜ್ಬುಲ್ ಮುಜಾಯಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಿದ್ದ ಭಾರತೀಯ ಸೇನಾ ಪಡೆಯ ಯೋಧನನ್ನು ಅಪಹರಿಸಲಾಗಿದೆ...
ಶ್ರೀನಗರ: ಹಿಜ್ಬುಲ್ ಮುಜಾಯಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಿದ್ದ ಭಾರತೀಯ ಸೇನಾ ಪಡೆಯ ಯೋಧನನ್ನು ಅಪಹರಿಸಲಾಗಿದೆ.
ಮೋಸ್ಟ್ ವಾಂಟೆಡ್ ಉಗ್ರ ಸಮೀರ್ ಟೈಗರ್ ನನ್ನು ಕೊಂದಿದ್ದ ಭಾರತೀಯ ಯೋಧನನ್ನು ಔರಂಗಜೇಬ್ ಎಂದು ಗುರುತಿಸಲಾಗಿದ್ದು ಇವರು ಪೂಂಚ್ ನ ನಿವಾಸಿಯಾಗಿದ್ದರು.
ಯೋಧ ಔರಂಗಜೇಜ್ ಅವರು 23 ರಾಷ್ಟ್ರೀಯ ರೈಫಲ್ಸ್ ಗೆ ಸೇರಿದವರಾಗಿದ್ದು ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆ ಪುಲ್ವಾಮಾದಲ್ಲಿ ಅವರನ್ನು ಶಸ್ತ್ರ ಸಜ್ಜಿತ ಉಗ್ರರ ತಂಡ ಗನ್ ಪಾಯಿಂಟ್ ನಲ್ಲಿ ಅಪಹರಣ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಮೋಸ್ಟ್ ವಾಂಟೆಡ್ ಉಗ್ರ ಸಮೀರ್ ಟೈಗರ್ ಹಾಗೂ ಮತ್ತೋರ್ವ ಉಗ್ರನನ್ನು ಹತ್ಯೆಗೈಯಲಾಗಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ