ನಿನ್ನೆಯಷ್ಟೇ ಆರ್'ಜೆಡಿ ಇಫ್ತಾರ್ ಕೂಟವನ್ನು ಆಯೋಜಿಸಿತ್ತು. ಇಫ್ತಾರ್ ಕೂಟದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಲಾಲೂ ಜೀ, ರಬ್ರಿ ಜೀ, ತೇಜಸ್ವಿ, ತೇಜ್, ಮಿಸಾ ಎಲ್ಲರೂ ನನ್ನ ಕುಟುಂಬದ ಸ್ನೇಹಿತರು. ಅವರ ಆಹ್ವಾನದ ಮೇರೆಗೆ ನಾನು ಇಲ್ಲಿಗೆ ಬಂದಿದ್ದೇನೆ. ಬಿಜೆಪಿ ನನ್ನ ಪಕ್ಷ ಹೌದು, ಆದರೆ, ಇದು ನನ್ನ ಕುಟುಂಬ ಎಂದು ಹೇಳಿದ್ದಾರೆ.