ಉಗ್ರ ಸಂಘಟನೆಗಳಿಗೆ ಸಡ್ಡು; ಸೈನಿಕರಿಂದ ತರಬೇತಿ ಪಡೆದು ಭಾರತೀಯ ಸೇನೆಗೆ ಆಯ್ಕೆಯಾದ ಕಾಶ್ಮೀರಿ ಯುವಕರು

ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಯುವಕರು ಉಗ್ರ ಸಂಘಟನೆ ಪಾಲಾಗುವುದನ್ನು ತಡೆಯಲು ಭಾರತೀಯ ಸೇನೆ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಅಭೂತಪೂರ್ವ ಯಶಸ್ಸು ದೊರೆತಿದ್ದು, ಸೈನಿಕರಿಂದ ತರಬೇತಿ ಪಡೆದಿದ್ದ 8 ಮಂದಿ ಯುವಕರು ಇದೀಗ ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ.
ಸೇನೆಗೆ ಆಯ್ಕೆಯಾದ ಕಾಶ್ಮೀರ ಯುವಕರು
ಸೇನೆಗೆ ಆಯ್ಕೆಯಾದ ಕಾಶ್ಮೀರ ಯುವಕರು
Updated on
ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಯುವಕರು ಉಗ್ರ ಸಂಘಟನೆ ಪಾಲಾಗುವುದನ್ನು ತಡೆಯಲು ಭಾರತೀಯ ಸೇನೆ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಅಭೂತಪೂರ್ವ ಯಶಸ್ಸು ದೊರೆತಿದ್ದು, ಸೈನಿಕರಿಂದ ತರಬೇತಿ ಪಡೆದಿದ್ದ 8 ಮಂದಿ ಯುವಕರು ಇದೀಗ ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ.
ಹೌದು.. ಈ ಹಿಂದೆ ಭಾರತೀಯ ಸೇನೆ ತರಬೇತಿ ನೀಡಿದ್ದ 16 ಮಂದಿ ಯುವಕರ ಪೈಕಿ 8 ಮಂದಿ ಯುವಕರು ಭಾರತೀಯ ಸೇನೆಗೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಉದಮ್ ಪುರದಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ಈ 8 ಮಂದಿ ಉತ್ತೀರ್ಣರಾಗಿದ್ದು, ಕಾಶ್ಮೀರದ ಜುಲ್ಲಾಸ್ ಸೆಕ್ಟರ್ ನಲ್ಲಿ ಸೇನೆಗೆ ಆಯ್ಕೆಯಾದ ಯುವಕರನ್ನು ಗೌರವಿಸಲಾಯಿತು. ಅಲ್ಲದೆ ದೇಶ ಸೇವೆಗೆ ಆಗಮಿಸುವಂತೆ ವಿದ್ಯುಕ್ತವಾಗಿ ಸ್ವಾಗತ ಕೊರಲಾಯಿತು.
ಇನ್ನು ಕಾಶ್ಮೀರದಲ್ಲಿ ಯುವಕರನ್ನು ಉಗ್ರ ಸಂಘಟನೆಗಳತ್ತ ಆಕರ್ಷಿಸುವ ಅಕ್ರಮ ಚಟುವಟಿಕೆ ಅವ್ಯಾಹತವಾಗಿ ನಡೆಯುತ್ತಿದೆ. ಇದೀಗ ಈ ಚಟುವಟಿಕೆಗೆ ಸಡ್ಡು ಹೊಡೆದಿರುವ ಸೇನೆ ಕಾಶ್ಮೀರಿ ಯುವಕರಿಗೆ ತರಬೇತಿ ನೀಡಿ ಅವರನ್ನು ಸೇನೆಗೆ ಸೇರಿಸಲು ಮುಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com