ಉತ್ತರ ಪ್ರದೇಶದಲ್ಲಿ ಚಂಡಮಾರುತ: 13 ಸಾವು 23 ಮಂದಿಗೆ ಗಾಯ

ಉತ್ತರ ಪ್ರದೇಶದಲ್ಲಿ ಚಂಡಮಾರುತಕ್ಕೆ ಸುಮಾರು 13 ಮಂದಿ ಬಲಿಯಾಗಿದ್ದು, 28 ಜನ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಸೀತಾಪುರ,ಗೊಂಡಾ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ಲಕ್ನೋ: ಉತ್ತರ ಪ್ರದೇಶದಲ್ಲಿ ಚಂಡಮಾರುತಕ್ಕೆ ಸುಮಾರು 13 ಮಂದಿ ಬಲಿಯಾಗಿದ್ದು, 28 ಜನ ಗಾಯಗೊಂಡಿದ್ದಾರೆ. ಉತ್ತರ ಪ್ರದೇಶದ ಸೀತಾಪುರ,ಗೊಂಡಾ  ಶ್ರಾವಸ್ತಿ, ಫೈಜಾಬಾದ್, ಮತ್ತು ಬಸ್ತಿ ಜಿಲ್ಲೆಗಳು ಚಂಡಮಾರುತಕ್ಕೊಳಗಾಗಿವೆ.
ಸೀತಾಪುರದಲ್ಲಿ 6 ಮಂದಿ ಹಾಗೂ ಗೊಂಡಾದಲ್ಲಿ 3 ಕೌಶಂಬಿಯಲ್ಲಿ 2 ಮತ್ತು ಸೀತಾಪುರ ಮತ್ತು  ಪೈಜಾಬಾದ್ ನಲ್ಲಿ ತಲಾ ಒಬ್ಬೊಬ್ಬರು ಸಾವನ್ನಪ್ಪಿದ್ದಾರೆ. ಸೀತಾಪುರ ಮತ್ತು ಫೈಜಾಬಾದ್ ನಲ್ಲಿ 11 ಮತ್ತು ಹರ್ದೋಯಿಯಲ್ಲಿ 17 ಮಂದಿ ಗಾಯಗೊಂಡಿದ್ದಾರೆ.
ಚಂಡಮಾರುತದಿಂದ ಅನಾಹುತಕ್ಕೊಳಗಾದ ಪ್ರದೇಶಗಳಿಗೆ  ಖೂಡಲೇ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒಧಗಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.
ಚಂಡಮಾರುತದಿಂದ ಸಾವನ್ನಪ್ಪಿದ ಕುಟುಂಬದ ಸಂತ್ರಸ್ತರಿಗೆ ಪರಿಹಾರ ನೀಡುವಂತೆ ತಿಳಿಸಿದ್ದಾರೆ. ಇನ್ನೂ ಎರಡು ದಿನಗಳ ಕಾಲ ಚಂಡಮಾರುತ ಹಾಗೂ ಮಳೆ  ಬೀಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com