ರಂಜಾನ್ ಕದನ ವಿರಾಮ ವಿಸ್ತರಣೆ , ಜೂ.17 ರಂದು ನಿರ್ಧಾರ

ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ ಕದನ ವಿರಾಮವನ್ನು ವಿಸ್ತರಿಸಬೇಕೂ ಅಥವಾ ಬೇಡವೊ ಎಂಬ ಬಗ್ಗೆ ಈದ್ ಉಲ್ ಫಿತರ್ ಹಬ್ಬದ ನಂತರ ಜೂ.17 ರಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ರಾಜನಾಥ್ ಸಿಂಗ್
ರಾಜನಾಥ್ ಸಿಂಗ್
Updated on: 

ನವದೆಹಲಿ:  ಕಣಿವೆ ರಾಜ್ಯ ಜಮ್ಮು-ಕಾಶ್ಮೀರದಲ್ಲಿ  ಕದನ ವಿರಾಮವನ್ನು ವಿಸ್ತರಿಸಬೇಕೂ ಅಥವಾ ಬೇಡವೊ ಎಂಬ ಬಗ್ಗೆ ಈದ್ ಉಲ್ ಫಿತರ್  ಹಬ್ಬದ ನಂತರ  ಜೂ.17 ರಂದು ನಿರ್ಧಾರ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಕಳೆದೊಂದು ತಿಂಗಳಿನಿಂದ ಈ ಪ್ರದೇಶದಲ್ಲಿ ಕದನ ವಿರಾಮ ಘೋಷಣೆಯಾಗಿರುವುದರಿಂದ ಕಲ್ಲು ತೂರಾಟದಂತಹ ಘಟನೆಗಳು ಕ್ಷೀಣಿಸಿವೆ.  ಆದರೆ, ಉಗ್ರ ಸಂಘಟನೆಗಳಿಗೆ  ಸ್ಥಳೀಯ ಯುವಕರನ್ನು ಸೇರ್ಪಡೆ ಮಾಡಿಕೊಳ್ಳಲಾಗುತ್ತಿದೆ. ಗ್ರೇನೆಡ್  ಸ್ಟೋಟದಂತಹ ಘಟನೆಗಳು ಮರುಕಳಿಸುತ್ತಲೇ ಎಂಬಂತಹ ಮಾಹಿತಿಗಳು ತಿಳಿದುಬಂದಿವೆ.

ಕದನ ವಿರಾಮ ಘೋಷಣೆಯಾದ  ಮೊದಲ 19 ದಿನಗಳಲ್ಲಿ 23 ಕ್ಕೂ ಹೆಚ್ಚು ಯುವಕರನ್ನು ಉಗ್ರ  ಸಂಘಟನೆಗಳಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂಬಂತಹ ಶಂಕೆಯನ್ನು ಕೇಂದ್ರಸರ್ಕಾರ ಹೊಂದಿದೆ.  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ದೊರೆತಿರುವ ಮಾಹಿತಿ ಪ್ರಕಾರ  ಶೇ.80 ರಷ್ಟು ಗ್ರೇನೆಡ್ ಸ್ಪೋಟದ ಘಟನೆಗಳು ಈ ಅವಧಿಯಲ್ಲಿಯೇ ನಡೆದಿವೆ ಎಂಬುದು ತಿಳಿದುಬಂದಿದೆ.

ರಂಜಾನ್ ವೇಳೆಯಲ್ಲಿ ಕದನ ವಿರಾಮ ಘೋಷಣೆಯನ್ನು  ರಕ್ಷಣಾ ತಜ್ಞರು ಪ್ರಶ್ನಿಸಿದ್ದಾರೆ. ಈ ವೇಳೆಯಲ್ಲಿ ಯುವಕರನ್ನು ಉಗ್ರರು ಬಳಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ ಎಂಬಂತಹ ಮಾಹಿತಿಗಳು ಕೇಳಿಬರುತ್ತಿವೆ.

 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com