ಪತ್ರಕರ್ತ ಬುಖಾರಿ ಹತ್ಯೆ: 4ನೇ ಆರೋಪಿಯ ಫೋಟೋ ಬಿಡುಗಡೆ, ತನಿಖೆಗಾಗಿ ಎಸ್ಐಟಿ ರಚನೆ

'ರೈಸಿಂಗ್ ಕಾಶ್ಮೀರ್' ದಿನ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಶುಜಾತ್ ಬುಖಾರಿಯ ಹತ್ಯೆಯ 4 ನೇ ಆರೋಪಿಯ ಫೋಟೊವನ್ನು ಜಮ್ಮು-ಕಾಶ್ಮೀರ ಪೊಲೀಸರು ಬಹಿರಂಗಗೊಳಿಸಿದ್ದಾರೆ.
ಶುಜಾತ್ ಬುಖಾರಿ ಹತ್ಯೆ: 4 ನೇ ಆರೋಪಿಯ ಫೋಟೋ ಬಹಿರಂಗ, ತನಿಖೆಗಾಗಿ ಎಸ್ಐಟಿ ರಚನೆ
ಶುಜಾತ್ ಬುಖಾರಿ ಹತ್ಯೆ: 4 ನೇ ಆರೋಪಿಯ ಫೋಟೋ ಬಹಿರಂಗ, ತನಿಖೆಗಾಗಿ ಎಸ್ಐಟಿ ರಚನೆ
ಶ್ರೀನಗರ: 'ರೈಸಿಂಗ್ ಕಾಶ್ಮೀರ್' ದಿನ ಪತ್ರಿಕೆಯ ಸಂಪಾದಕ, ಹಿರಿಯ ಪತ್ರಕರ್ತ ಶುಜಾತ್ ಬುಖಾರಿಯ ಹತ್ಯೆಯ 4 ನೇ ಆರೋಪಿಯ ಫೋಟೊವನ್ನು ಜಮ್ಮು-ಕಾಶ್ಮೀರ ಪೊಲೀಸರು ಬಹಿರಂಗಗೊಳಿಸಿದ್ದಾರೆ. 
ಪೊಲೀಸರು ಬಹಿರಂಗಪಡಿಸಿರುವ ಫೋಟೊದಲ್ಲಿ ವ್ಯಕ್ತಿಯ ಫೋಟೋ ಸ್ಪಷ್ಟವಾಗಿ ಕಾಣುತ್ತಿದ್ದು, ಆತನನ್ನು ಗುರುತಿಸಿ ಬಂಧಿಸಲು ಸಾರ್ವಜನಿಕರಿಂದ ಪೊಲೀಸರು ನೆರವು ಕೋರಿದ್ದಾರೆ.  ಬುಖಾರಿ ಮೇಲೆ ಗುಂಡಿನ ದಾಳಿ ನಡೆದಾಗ ಸ್ಥಳೀಯರು ಚಿತ್ರೀಕರಿಸಿದ ವಿಡಿಯೋದಲ್ಲಿ ಫೋಟೊ ಸಿಕ್ಕಿದ್ದು, ಗುಂಡಿನ ದಾಳಿ ನಡೆಸಿದ ಬಳಿಕ ಕಾರಿನಲ್ಲಿದ್ದ ಭದ್ರತಾ ಸಿಬ್ಬಂದಿಯ ಬಳಿ ತಡಕಾಡುತ್ತಿದ್ದದ್ದೂ ವಿಡಿಯೋದಲ್ಲಿ ಸೆರೆಯಾಗಿದೆ. 
ವಿಡಿಯೋದಲ್ಲಿ ದಾಖಲಾಗಿರುವ ವ್ಯಕ್ತಿ ಬುಖಾರಿ ಕಾರಿನಲ್ಲಿ ಬಿದ್ದಿದ್ದ ಭದ್ರತಾ ಸಿಬ್ಬಂದಿಗಳ ಪಿಸ್ತೂಲ್ ನ್ನು ಪೊಲೀಸ್ ಸಿಬ್ಬಂದಿಗಳ ಎದುರೇ ಕೊಂಡೊಯ್ದ ಘಟನೆಯೂ ದೃಶ್ಯದಲ್ಲಿ ಸೆರೆಯಾಗಿದೆ.  ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಪೊಲೀಸರು ಜೂ.14 ರಂದು ರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದಿದ್ದ ಶಂಕಿತರ ಎರಡು ಚಿತ್ರಗಳನ್ನು ಪ್ರಕಟಿಸಿದ್ದರು. ಆದರೆ ಅವರ ಮುಖ ಸ್ಪಷ್ಟವಾಗಿ ಗೋಚರಿಸುತ್ತಿರಲಿಲ್ಲ. 
ಬೈಕ್ ಚಾಲನೆ ಮಾಡುತ್ತಿದ್ದ ಓರ್ವ ವ್ಯಕ್ತಿ ಹೆಲ್ಮೆಟ್ ಹಾಕಿದ್ದರೆ, ಹಿಂಬದಿ ಕುಳಿತಿದ್ದ ಮತ್ತೋರ್ವ ತನ್ನ ಮುಖವನ್ನು ಮುಚ್ಚಿಕೊಂಡಿದ್ದ. ಸಿಸಿಟಿವಿಯಲ್ಲಿ ಸೆರೆಯಾಗಿದ್ದ ಮಧ್ಯದಲ್ಲಿ ಕುಳಿತಿದ್ದ ವ್ಯಕ್ತಿಯ ಮುಖ ಸ್ಪಷ್ಟವಾಗಿ ಕಾಣಿಸುತ್ತಿರಲಿಲ್ಲ. ಫೋಟೋದಲ್ಲಿರುವ ವ್ಯಕ್ತಿಯ ಸುಳಿವು ಸಿಕ್ಕರೆ ಕೊಥಿಬಾಗ್ ಪೊಲೀಸ್ ಠಾಣೆಯ 9596770623 ಈ ಸಂಖ್ಯೆ ಅಥವಾ ಶ್ರೀನಗರದ ಪಿಸಿಆರ್ 9596222550, 9596222551, 01942477568 ನ್ನು ಸಂಪರ್ಕಿಸಿ ವಿವರ ನೀಡಬಹುದಾಗಿದೆ. ಒಂದು ದಶಕದಲ್ಲಿ ಉಗ್ರರ ಗುಂಡೇಟಿಕಿಗೆ ಬಲಿಯಾಗಿರುವ 3 ನೇ ಪತ್ರಕರ್ತ ಬುಖಾರಿ ಆಗಿದ್ದು, ಪ್ರಕರಣದ ತನಿಖೆಗಾಗಿ ಡಿಐಜಿ ಮಟ್ಟದ ಅಧಿಕಾರಿ ನೇತೃತ್ವದ ಎಸ್ ಐಟಿಯನ್ನು ರಚಿಸಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com