ಛತ್ತೀಸ್ ಘರ್: ಭದ್ರತಾ ಪಡೆ ಎನ್ ಕೌಟರ್ ಗೆ ಮೂವರು ನಕ್ಸಲರ ಬಲಿ

ಭದ್ರತಾ ಪಡೆ ಜತೆಗಿನ ಗುಂಡಿನ ಕಾಳಗದಲ್ಲಿ ಮೂವರು ನಕ್ಸರಲ್ರು ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ. ಛತ್ತೀಸ್ ಘಡದ ಸುಕ್ಮಾ ಜಿಲ್ಲೆಯಲ್ಲಿ ಈ ಎನ್ ಕೌಟರ್ ನಡೆದಿದೆ ಎಂದು ಅಧಿಕಾರಿಗ್ಳು ಹೇಳಿದರು.
ಛತ್ತೀಸ್ ಘರ್: ಭದ್ರತಾ ಪಡೆ ಎನ್ ಕೌಟರ್ ಗೆ ಮೂವರು ನಕ್ಸಲರ ಬಲಿ
ಛತ್ತೀಸ್ ಘರ್: ಭದ್ರತಾ ಪಡೆ ಎನ್ ಕೌಟರ್ ಗೆ ಮೂವರು ನಕ್ಸಲರ ಬಲಿ
ರಾಯ್ ಪುರ(ಛತ್ತೀಸ್ ಘರ್): ಭದ್ರತಾ ಪಡೆ ಜತೆಗಿನ ಗುಂಡಿನ ಕಾಳಗದಲ್ಲಿ ಮೂವರು ನಕ್ಸರಲ್ರು ಎನ್ ಕೌಂಟರ್ ಗೆ ಬಲಿಯಾಗಿದ್ದಾರೆ. ಛತ್ತೀಸ್ ಘರ್ ಸುಕ್ಮಾ ಜಿಲ್ಲೆಯಲ್ಲಿ ಈ ಎನ್ ಕೌಟರ್ ನಡೆದಿದೆ ಎಂದು ಅಧಿಕಾರಿಗ್ಳು ಹೇಳಿದರು.
ಸುಮಾರು 10 ಗಂಟೆಗೆ ಚಿಂತಾಗುಫ ಪೊಲೀಸ್ ಠಾಣೆ  ವ್ಯಾಪ್ತಿಯ ಗಟ್ಟಾಪಾದ್ ಹಾಗು ತೋಕನ್ಪಲ್ಲಿ ಗ್ರಾಮಗಳ ನಡುವೆ  ಅರಣ್ಯ ಪ್ರದೇಶದಲ್ಲಿ ಈ ಗುಂಡಿನ ಕಾಳಗ ನಡೆದಿದೆ ಎಂದು  ಸುಕ್ಮಾ ಪೊಲೀಸ್ ಅಧೀಕ್ಷಕ ಅಭಿಷೇಕ್ ಮೀನಾ ಪಿಟಿಐಗೆ ತಿಳಿಸಿದ್ದಾರೆ.
ಗುರುವಾರ ರಾತ್ರಿ ರಾಜಧಾನಿ ರಾಯ್ ಪುರದಿಂದ  500 ಕಿ.ಮೀ ದೂರದಲ್ಲಿರುವ ಚಿಂತಾಗುಫ  ಅರಣ್ಯದಲ್ಲಿ ಜಿಲ್ಲಾ ರಕ್ಷಣಾ ಪಡೆ ಹಾಗೂ  ವಿಶೇಷ ಟಾಸ್ಕ್ ಫೋರ್ಸ್) ಜಂಟಿ ತಂಡ ನಕ್ಸಲ್ ಶೋಧ ಕಾರ್ಯಾಚರಣೆ ಪ್ರಾರಂಭಿಸಿತ್ತು ಎಂದು ಅವರು ಹೇಳಿದ್ದಾರೆ.
ಭದ್ರತಾ ಪಡೆಗಳು ಗಟ್ಟಾಪಾದ್ ಹಾಗು ತೋಕನ್ಪಲ್ಲಿ ಗ್ರಾಮದ ಅರಣ್ಯಕ್ಕೆ ಬಂಡಾಗ ನಕ್ಸಲರು ಅವರ ಮೇಲೆ ಗುಂಡು ಹಾರಿಸಿದ್ದಾರೆ. ಪ್ರತಿಯಾಗಿ ಭದ್ರತಾ ಪಡೆಗಳೂ ಸಹ ದಾಳಿ ಮಾಡಿದ್ದು ನಕ್ಸಲರು ಕಾಡಿನಲ್ಲಿ ನಾಪತ್ತೆಯಾದರು.
ಈ ಸಂದರ್ಭ ಭದ್ರತಾ ಪಡೆಗಳು ನಡೆಸಿದ ಶೋಧದಲ್ಲಿ ಮೂವರು ನಕ್ಸಲರ ಮೃತದೇಹಗಳು ಪತ್ತೆಯಾಗಿದೆ., 315 ಬೋರ್ ರೈಫಲ್ಸ್ ಸೇರಿ ನಾಲ್ಕು ಶಾಸ್ತ್ರಗಳು ಪತ್ತೆಯಾಗಿದೆ. ಹತ್ಯೆಯಾದ ನಕ್ಸಲರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com