ಮಗಳನ್ನು ರೇಪ್ ಮಾಡಿದ್ದು ಅಲ್ಲದೆ ಪತ್ನಿಯನ್ನು ಕೋರ್ಟ್‌ನಲ್ಲೇ ಕತ್ತು ಸೀಳಿ ಕೊಂದ ಪಾಪಿ!

ಮಗಳ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸಿದ್ದ ವ್ಯಕ್ತಿಯೊಬ್ಬ ಕೋರ್ಟ್‌ನಲ್ಲೇ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಗುವಾಹಟಿ: ಮಗಳ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸಿದ್ದ ವ್ಯಕ್ತಿಯೊಬ್ಬ ಕೋರ್ಟ್‌ನಲ್ಲೇ ತನ್ನ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ ಭೀಕರ ಘಟನೆ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ನಡೆದಿದೆ. 
ಅಸ್ಸಾಂನ ದಿಬ್ರುಗಢ್ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಆವರಣದಲ್ಲಿ ಈ ಕೃತ್ಯ ನಡೆಸಿದ್ದು ಪತ್ನಿ ರೀಟಾ ನಹಾರ್ ಡೇಕಾರನ್ನು ಹತ್ಯೆ ಮಾಡಿದ ಹಂತಕ ಪತಿ ಪೂರ್ಣ ನಹಾರ್ ಡೇಕಾನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. 
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 9 ತಿಂಗಳ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಪೂರ್ಣ ನಹಾರ್ ಡೇಕಾ. ನಿನ್ನೆ ಈ ಪ್ರಕರಣದ ವಿಚಾರಣೆ ಇತ್ತು. ಈ ವೇಳೆ ಪತಿಯ ವಿರುದ್ದ ದೂರು ದಾಖಲಿಸಿದ್ದ ಪತ್ನಿಯೂ ಸಹ ವಿಚಾರಣೆಗೆ ಬಂದಿದ್ದರು. 
ಪತ್ನಿಯನ್ನು ಕಂಡ ತಕ್ಷಣ ಪೂರ್ಣ ತನ್ನ ಜೇಬಿನಲ್ಲಿದ್ದ ಚಾಕುವಿನಿಂದ ಆಕೆಯ ಗಂಟಲು ಸೀಳಿ ಭೀಕರವಾಗಿ ಕೊಲೆ ಮಾಡಿದ ಎಂದು ದಿಬ್ರುಗಢ ಡಿಎಸ್ಪಿ ಪ್ರದೀಪ್ ಸೈಕಿಯಾ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com