ಹಿಂದೂಗಳನ್ನು ಪ್ರೀತಿಸುವುದೆಂದರೆ ಮುಸ್ಲಿಮರನ್ನು ದ್ವೇಷಿಸುವುದೇ?: ಮಮತಾ

ತಮ್ಮ ವಿರುದ್ಧ ಅತಿಯಾದ ಮುಸ್ಲಿಂ ತುಷ್ಟೀಕರಣ ಆರೋಪ ಮಾಡುತ್ತಿರುವವರು ಹಿಂದೂಗಳಿಗೂ ಸ್ನೇಹಿತರಲ್ಲ, ಮುಸ್ಲಿಮರಿಗೂ ಸ್ನೇಹಿತರಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೇಟು
ಹಿಂದೂಗಳನ್ನು ಪ್ರೀತಿಸುವುದೆಂದರೆ ಮುಸ್ಲಿಮರನ್ನು ದ್ವೇಷಿಸುವುದೇ?: ಮಮತಾ
ಹಿಂದೂಗಳನ್ನು ಪ್ರೀತಿಸುವುದೆಂದರೆ ಮುಸ್ಲಿಮರನ್ನು ದ್ವೇಷಿಸುವುದೇ?: ಮಮತಾ
ಕೋಲ್ಕತ್ತಾ: ತಮ್ಮ ವಿರುದ್ಧ ಅತಿಯಾದ ಮುಸ್ಲಿಂ ತುಷ್ಟೀಕರಣ ಆರೋಪ ಮಾಡುತ್ತಿರುವವರು ಹಿಂದೂಗಳಿಗೂ ಸ್ನೇಹಿತರಲ್ಲ, ಮುಸ್ಲಿಮರಿಗೂ ಸ್ನೇಹಿತರಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತಿರುಗೇಟು ನೀಡಿದ್ದಾರೆ. 
ಕೆಲವರು ನನ್ನ ವಿರುದ್ಧ ಮುಸ್ಲಿಂ ತುಷ್ಟೀಕರಣ ಮಾಡುತ್ತಿರುವ ಆರೋಪ ಮಾಡುತ್ತಾರೆ. ಹಿಂದೂಗಳನ್ನು ಪ್ರೀತಿಸುವುದೆಂದರೆ ಮುಸ್ಲಿಮರನ್ನು ದ್ವೇಷಿಸಬೇಕೆ ಎಂದು ಅವರನ್ನು ಕೇಳುತ್ತೇನೆ, ನಾನು ಎಲ್ಲಾ ಧರ್ಮ, ಸಮುದಾಯಗಳನ್ನೂ ಪ್ರೀತಿಸುತ್ತೇನೆ, ಈ ದೇಶ ಎಲ್ಲರಿಗೂ ಸೇರಿದ್ದು ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ. 
ಕೋಲ್ಕತ್ತಾದಲ್ಲಿ ರಂಜಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಮಮತಾ ಬ್ಯಾನರ್ಜಿ, ನನ್ನ ವಿರುದ್ಧ ಮುಸ್ಲಿಂ ತುಷ್ಟೀಕರಣದ ಆರೋಪ ಮಾಡುತ್ತಿರುವವರು ಹಿಂದೂಗಳಿಗೂ ಸ್ನೇಹಿತರಲ್ಲ, ಮುಸ್ಲಿಮರಿಗೂ ಸ್ನೇಹಿತರಲ್ಲ ಎಂದಿದ್ದಾರೆ. ಇದೇ ವೇಳೆ ರಂಜಾನ್ ದಿನದಂದೇ ನಿಗದಿಯಾಗಿದ್ದ ನೀತಿ ಆಯೋಗದ ಸಭೆಯ ದಿನಾಂಕ  ತಮ್ಮ ಪ್ರತಿಭಟನೆಯಿಂದಲೇ ಮುಂದೂಡಿಕೆಯಾಗಿದೆ ಎಂದೂ ಮಮತಾ ಬ್ಯಾನರ್ಜಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com