ನೋಟು ನಿಷೇಧದ ಬಳಿ 'ಕಾಳ ಧನ' 'ಜನ ಧನ'ವಾಗಿ ಹೋಯಿತು; ಕೇಂದ್ರ ಹಣಕಾಸು ರಾಜ್ಯ ಸಚಿವ

ನೋಟು ನಿಷೇಧದ ಬಳಿಕ ಕಾಳ ದನ ಸಾರ್ವಜನಿಕರ ಹಣವಾಗಿ ಬದಲಾಗಿ ಹೋಯಿತು ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ ಅವರು ಶುಕ್ರವಾರ ಹೇಳಿದ್ದಾರೆ...
ಕೇಂದ್ರ ಹಣಕಾಸು ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ
ಕೇಂದ್ರ ಹಣಕಾಸು ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ
ಮುಂಬೈ; ನೋಟು ನಿಷೇಧದ ಬಳಿಕ ಕಾಳ ದನ ಸಾರ್ವಜನಿಕರ ಹಣವಾಗಿ ಬದಲಾಗಿ ಹೋಯಿತು ಎಂದು ಕೇಂದ್ರ ಹಣಕಾಸು ರಾಜ್ಯ ಸಚಿವ ಶಿವ ಪ್ರತಾಪ್ ಶುಕ್ಲಾ ಅವರು ಶುಕ್ರವಾರ ಹೇಳಿದ್ದಾರೆ. 
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, ಬಳಕೆಯಾಗದೆ ಲಾಕರ್ ಗಳಲ್ಲಿದ್ದ ಹಣಗಳು ಬ್ಯಾಂಕ್ ಗಳಲ್ಲಿ ಜಮಾವಣೆಗೊಂಡಿತು. ನಂತರ ಅದನ್ನು ದೇಶದ ಜನತೆ ಬಳಕೆ ಮಾಡಿಕೊಳ್ಳುವಂತಾಯಿತು. ನಂತರ ಕಾಳಧನವೇ ಜನ ಧನವಾಗಿ ಹೋಯಿತು. ಇದನ್ನೇ ಇದೀಗ ದೇಶದ ಅಭಿವೃದ್ಧಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. 
 ನೋಟು ನಿಷೇಧಗೊಂಡ ಬಳಿಕ ಆರಂಭಿಕ ದಿನಗಳಲ್ಲಿ ಜನರು ಸಮಸ್ಯೆ ಎದುರಿಸುವಂತಾಗಿತ್ತು. ಇದೀಗ ಆ ನಿರ್ಧಾರದಿಂದಾದ ಲಾಭಗಳು ಜನರಿಗೆ ತಲುಪುತ್ತಿವೆ. ಕಾಳಧನ ಸಾರ್ವಜನಿಕರ ಹಣವಾಗಿ ಮಾರ್ಪಟ್ಟಿದೆ ಎಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com