ಸಂಘ ಉಗ್ರವಾದದ ಬಗ್ಗೆ ಮಾತನಾಡಿದ್ದೆನೆಯೇ ವಿನಃ ಹಿಂದೂ ಉಗ್ರವಾದದ ಬಗ್ಗೆಯಲ್ಲ; ದಿಗ್ವಿಜಯ್ ಸಿಂಗ್

ನಾನು ಎಂದಿಗೂ ಸಂಘಿ ಭಯೋತ್ಪಾದನೆ ಎಂದು ಮಾತಾನಾಡಿದ್ದೇನೆಯೇ ವಿನಃ ಹಿಂದೂ ಭಯೋತ್ಪಾದಕರೆಂದು ಹೇಳಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ...
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್
ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್
ಭೋಪಾಲ್; ನಾನು ಎಂದಿಗೂ ಸಂಘವಾದ ಬಗ್ಗೆ ಮಾತಾನಾಡಿದ್ದೇನೆಯೇ ವಿನಃ ಹಿಂದು ವಾದ ಇದೆ ಎಂದು ಹೇಳಿಲ್ಲ ಎಂದು ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ಶುಕ್ರವಾರ ಹೇಳಿದ್ದಾರೆ. 
ಈ ಹಿಂದೆ ಹೇಳಿಕೆ ನೀಡಿದ್ದ ದಿಗ್ವಿಜಯ್ ಸಿಂಗ್ ಅವರು, ಮಲೆಗಾಂವ್ ಸ್ಫೋಟವಾಗಲೀ, ಮೆಕ್ಕಾ ಮಸೀದಿ ಸ್ಫೋಟವಾಗಲೀ ಅಥವಾ ದರ್ಘಾ ಶರೀಫ್ ಸ್ಫೋಟವಾಗಲೀ ಯಾವುದೇ ಸ್ಫೋಟವಾದರೂ, ಅದನ್ನು ಸಂಘ ಪರಿವಾರಗಳ ಸಿದ್ಧಾಂತಗಳಿಂದ ಪ್ರೇರಿತರಾದ ಜನರು ಮಾಡಿದ್ದಾರೆಂದು ಹೇಳಿದ್ದರು. 
ದಿಗ್ವಿಜಯ್ ಸಿಂಗ್ ಅವರ ಈ ಹೇಳಿಕೆಗೆ ಬಿಜೆಪಿ ಸೇರಿದಂತೆ ಹಲವು ನಾಯಕರು ತೀವ್ರ ವಿರೋಧಗಳನ್ನು ವ್ಯಕ್ತಪಡಿಸಿದ್ದರು. 
ಈ ಹಿನ್ನಲೆಯಲ್ಲಿ ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿರುವ ಅವರು, ಹಿಂದೂ ಉಗ್ರವಾದವೆಂದು ದಿಗ್ವಿಜಯ್ ಸಿಂಗ್ ಅವರು ಹೇಳಿದ್ದಾರೆಂಬ ಮಾಹಿತಿ ತಪ್ಪು. ನಾನು ಎಂದಿಗೂ ಸಂಘ ಉಗ್ರವಾದ ಎಂಬ ಪದವನ್ನು ಬಳಸಿದ್ದೆನೆಯೇ ವಿನಃ ಎಂದಿಗೂ ಹಿಂದೂ ಉಗ್ರವಾದ ಪದ  ಬಳಸಿಲ್ಲ ಎಂದು ಹೇಳಿದ್ದಾರೆ. 
ಧರ್ಮದ ಆಧಾರದ ಮೇಲೆ ಭಯೋತ್ಪಾದನಾ ಚಟುವಟಿಕೆಗಳನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಭಯೋತ್ಪಾದನೆಗೆ ಯಾವುದೇ ಧರ್ಮ ಕೂಡ ಬೆಂಬಲವನ್ನು ನೀಡುವುದಿಲ್ಲ ಎಂದು ತಿಳಿಸಿದ್ದಾರೆ. 
ಬಳಿಕ ಆರ್'ಎಸ್ಎಸ್ ವಿರುದ್ಧ ಕಿರಿಕಾರಿರುವ ಅವರು, ಈ ಸಂಘಟನೆ ದೇಶದಲ್ಲಿ ಹಿಂಸಾಚಾರ ಹಾಗೂ ದ್ವೇಷವನ್ನು ಹುಟ್ಟುಹಾಕುತ್ತಿದೆ. ಭಯೋತ್ಪಾದನೆಯನ್ನು ಪ್ರಸರಿಸುತ್ತಿದೆ ಎಂದು ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com