ಭೋಪಾಲ್: ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಮತ್ತೆ ಆರ್'ಎಸ್ಎಸ್ ವಿರುದ್ಧ ಉಗ್ರವಾದದ ಆರೋಪ ಹೊರಿಸಿದ್ದಾರೆ.
ಸಾಗರ್ ಜಿಲ್ಲೆಯಲ್ಲಿ ಮಾತನಾಡಿದ ದಿಗ್ವಿಜಯ್ ಸಿಂಗ್ ಅವರು, ಉಗ್ರವಾದದ ಪ್ರಕರಣದಲ್ಲಿ ಬಂಧಿತ ಎಲ್ಲಾ ಹಿಂದುಗಳು ಆರ್'ಎಸ್ಎಸ್ ಜೊತೆಗೆ ಒಂದಲ್ಲಾ ಒಂದು ರೀತಿಯ ನಂಟನ್ನು ಹೊದಿದ್ದಾರೆಂದು ಹೇಳಿದ್ದಾರೆ.
ಮಹಾತ್ಮ ಗಾಂಧಿ ಹತ್ಯೆಗೈದ ಗೋಡ್ಸೆಯಿಂದ ಹಿಡಿದು ಹಲವು ಪ್ರಕರಣಗಳಲ್ಲಿ ನಾವು ಇದನ್ನು ಕಾಣಬಹುದು. ಆರ್'ಎಸ್ಎಸ್ ಸಿದ್ಧಾಂತಗಳು ದ್ವೇಷ, ಹಿಂಸೆ ಪಸರಿಸುತ್ತಿದೆ. ಅದು ಉಗ್ರವಾದಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಕೂಡ ಹಿಂದೂ ಉಗ್ರವಾದ ಎಂಬ ಪದ ಬಳಕೆ ಮಾಡಿ ದಿಗ್ವಿಜಯ್ ಸಿಂಗ್ ಅವರು ವಿವಾದಕ್ಕೀಡಾಗಿದ್ದರು.