ಅಸ್ಸಾಂ: ಎಟಿಎಂಗೆ ಲಗ್ಗೆ ಇಟ್ಟ ಇಲಿಗಳು, ಲಕ್ಷಾಂತರ ರೂಪಾಯಿ ನೋಟುಗಳು ಚೂರು ಚೂರು

ಇಲಿಗಳು ಬ್ಯಾಂಕಿನ ಎಟಿಎಂನಲ್ಲಿ ಸುಮಾರು 12.38 ಲಕ್ಷ ರೂಪಾಯಿ ....
ಎಟಿಎಂ ಯಂತ್ರದಲ್ಲಿ ಕಂಡುಬಂದ ಚೂರು ಚೂರಾದ ನೋಟುಗಳು
ಎಟಿಎಂ ಯಂತ್ರದಲ್ಲಿ ಕಂಡುಬಂದ ಚೂರು ಚೂರಾದ ನೋಟುಗಳು

ಗುವಾಹಟಿ: ಇಲಿಗಳು ಬ್ಯಾಂಕಿನ ಎಟಿಎಂನಲ್ಲಿ ಸುಮಾರು 12.38 ಲಕ್ಷ ರೂಪಾಯಿ ನೋಟುಗಳನ್ನು ಕತ್ತರಿಸಿ ಹಾಕಿರುವ ಘಟನೆ ಅಸ್ಸಾಂನಲ್ಲಿ ನಡೆದಿದೆ.

ಈ ಘಟನೆ ಅಸ್ಸಾಮ್ ರಾಜ್ಯದ ಉತ್ತರ ಭಾಗದ ಟಿನ್ಸುಕಿಯಾ ಪಟ್ಟಣದಲ್ಲಿ ನಡೆದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಟಿಎಂ ಕಳೆದ ಮೇ 20ರಿಂದ ಕೆಟ್ಟುಹೋಗಿತ್ತು. ಗ್ರಾಹಕರಿಗೆ ಹಣ ತೆಗೆಯಲು ಸಾಧ್ಯವಾಗುತ್ತಿರಲಿಲ್ಲ. ಏನಾಗಿರಬಹುದು ಎಂದು ಬ್ಯಾಂಕಿನ ಸಿಬ್ಬಂದಿ ಪರಿಶೀಲಿಸಿದಾಗ 500 ಮತ್ತು 2000 ಮುಖಬೆಲೆಯ ನೂರಾರು ನೋಟುಗಳು ಚೂರುಚೂರಾಗಿ ಬಿದ್ದಿದ್ದವು.

ಮೇ 19ರಂದು ಗುವಾಹಟಿ ಮೂಲದ ಹಣಕಾಸು ಸಂಸ್ಥೆ ಗ್ಲೋಬಲ್ ಬ್ಯುಸಿನೆಸ್ ಸೊಲ್ಯೂಷನ್ ಎಟಿಎಂನಲ್ಲಿ 29 ಲಕ್ಷದ 48 ಸಾವಿರ ರೂಪಾಯಿಗಳನ್ನು ಈ ಎಟಿಎಂನಲ್ಲಿ ಠೇವಣಿಯಿರಿಸಿತ್ತು. ಆದರೆ ಎಟಿಎಂ ಯಂತ್ರದಲ್ಲಿ ತಾಂತ್ರಿಕ ದೋಷ ಕಂಡುಬಂದು ಮರುದಿನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು.

ಯಂತ್ರವನ್ನು ದುರಸ್ತಿ ಮಾಡಲು ಬ್ಯಾಂಕಿನ ಅಧಿಕಾರಿಗಳು ಕೋಲ್ಕತ್ತಾದಿಂದ ಎಂಜಿನಿಯರ್ ಗಳನ್ನು ಕರೆಸಿಕೊಂಡರು. ಎಂಜಿನಿಯರ್ ಗಳು ಎಟಿಎಂ ಯಂತ್ರವನ್ನು ತೆರೆದು ನೋಡಿದಾಗ ನೋಟುಗಳು ಛಿದ್ರ ಛಿದ್ರವಾಗಿರುವುದು ಬೆಳಕಿಗೆ ಬಂತು. ಘಟನೆ ಬಳಿಕ ಎಸ್ ಬಿಐ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಿಸಿದ್ದಾರೆ.

ಎಟಿಎಂ ಯಂತ್ರವನ್ನು ದುರಸ್ತಿ ಮಾಡುವುದರಲ್ಲಿ ವಿಳಂಬತೆ ತೋರಿರದಿದ್ದರೆ ನಷ್ಟವನ್ನು ತಪ್ಪಿಸಬಹುದಾಗಿತ್ತು ಎಂದು ಸ್ಥಳೀಯರು ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com