ನವದೆಹಲಿ: ರಾಜಕೀಯ ಪಕ್ಷ ನೊಂದಾವಣೆಗಾಗಿ ಚುನಾವಣಾ ಆಯೋಗದ ಕದ ತಟ್ಟಿದ ಕಮಲ್ ಹಾಸನ್

ಮಕ್ಕಳ್ ನೀಧಿ ಮೈಯಮ್' ಪಕ್ಷದ ಸ್ಥಾಪಕ, ಸೂಪರ್ ಸ್ಟಾರ್ ಕಮಲ್ ಹಾಸನ್ ಬುಧವಾರ ನವದೆಹಲಿಯ ಚುನಾವಣಾ ಆಯೋಗದ ಪ್ರಧಾನ ಕಛೇರಿಗೆ ಭೇಟಿ ನೀಡಿದ್ದಾರೆ.
ಕಮಲ್ ಹಾಸನ್
ಕಮಲ್ ಹಾಸನ್
ನವದೆಹಲಿ: ಮಕ್ಕಳ್ ನೀಧಿ ಮೈಯಮ್' ಪಕ್ಷದ ಸ್ಥಾಪಕ, ಸೂಪರ್ ಸ್ಟಾರ್ ಕಮಲ್ ಹಾಸನ್ ಬುಧವಾರ ನವದೆಹಲಿಯ ಚುನಾವಣಾ ಆಯೋಗದ ಪ್ರಧಾನ ಕಛೇರಿಗೆ ಭೇಟಿ ನೀಡಿದ್ದಾರೆ. 
ತಮ್ಮ ಪಕ್ಷವನ್ನು ಅಧಿಕೃತವಾಗಿ ನೊಂದಾಯಿಸುವ ಸಲುವಾಗಿ ಅವರು ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿದ್ದಾರೆ. ಆಯೋಗದ ಭೇಟಿಯ ಬಳಿಕ ಮಾತನಾಡಿದ ನಟ, ರಾಜಕಾರಣಿ ಕಮಲ್ ಹಾಸನ್ ಫೆಬ್ರವರಿಯಲ್ಲಿ ಸ್ಥಾಪನೆಯಾದ ಪಕ್ಷ ಇತಿ ಶೀಘ್ರದಲ್ಲಿ ನೊಂದಾವಣೆಯಾಗುವ ನಿರೀಕ್ಷೆ ಇದೆ ಎಂದಿದ್ದಾರೆ.
"ಔಪಚಾರಿಕ ಭೇಟಿಗಾಗಿ ನಾನಿಲ್ಲಿಗೆ ಬಂದಿದ್ದೇನೆ.ಆಯೋಗದ ಅಧಿಕಾರಿಗಳು ಕೆಲವು ಪ್ರಶ್ನೆಗಳನ್ನು ಕೇಳಿದ್ದರು. ಆದರೆ ಪಕ್ಷ ನೊಂದಾವಣೆ ಸಂಬಂಧ ಅವರು ಯಾವ ಪ್ರಮುಖ ಆಕ್ಷೇಪಣೆಗಳನ್ನು ಎತ್ತಿಲ್ಲ" ಅವರು ಹೇಳಿದರು.
ಇಸಿ ಪಕ್ಷ ನೊಂದಣಿಗೆ ಯಾವ ಕಾಲಾವಕಾಶವನ್ನು ನಿಗದಿಪಡಿಸಿಲ್ಲ, ಆದರೆ ಪಕ್ಷ ನೊಂದಾವಣೆ ಅತ್ಯಂತ ಶೀಘ್ರವಾಗಿ ನೆರವೇರುವ ವಿಶ್ವಾಸವಿದೆ.
"ಪಕ್ಷದ ಚಿಹ್ನೆಯ ಸಂಬಂಧ ಇನ್ನೂ ಯಾವ ನಿರ್ಧಾರ ಕೈಗೊಂಡಿಲ್ಲ. ಈ ಕುರಿತಂತೆ ಪಕ್ಷದ ಇತರರೊಡನೆ ಚರ್ಚಿಸಿ ನಿರ್ಧರಿಸಲಾಗುತ್ತದೆ" ಕಮಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com